ರಾಯಚೂರು:ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗಳು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ನಡೆದಿದೆ.
ಮನೆಗೆ ತೆರಳುವಾಗ ಎದುರಾದ ಜವರಾಯ.. ತಂದೆ-ಮಗಳ ದುರ್ಮರಣ, ತಾಯಿ ಸ್ಥಿತಿ ಗಂಭೀರ - undefined
ಅಪರಿಚಿತ ವಾಹನವೊಂದು ತಂದೆ ಮಗಳನ್ನ ಬಲಿ ಪಡೆದಿದೆ. ಮದುವೆ ಮುಗಿಸಿ ಮನೆಗೆ ಹೋಗುತ್ತಿದ್ದವರು ಬಾರದ ಲೋಕಕ್ಕೆ ತೆರಳಿದ್ಧಾರೆ.
![ಮನೆಗೆ ತೆರಳುವಾಗ ಎದುರಾದ ಜವರಾಯ.. ತಂದೆ-ಮಗಳ ದುರ್ಮರಣ, ತಾಯಿ ಸ್ಥಿತಿ ಗಂಭೀರ](https://etvbharatimages.akamaized.net/etvbharat/prod-images/768-512-3701280-thumbnail-3x2-rcr.jpg)
ಘಟನೆಯಲ್ಲಿ ಹಂಚಿನಾಳ(ಯು) ಗ್ರಾಮದ ಹುಸೇನಪ್ಪ (47), ಖಾದರಬೀ (23) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇದೇ ಅಪಘಾತದಲ್ಲಿ ಹುಸೇನಪ್ಪ ಅವರ ಪತ್ನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.ಸಂಬಂಧಿಕರ ಊರಿಗೆ ಕಾರ್ಯಕ್ರಮಕ್ಕೆ ತೆರಳಿದ್ದ ಮೃತರು, ತಮ್ಮ ಬೈಕ್‌ನಲ್ಲಿ ವಾಪಸ್ ಸ್ವಗ್ರಾಮ ಹಂಚಿನಾಳಕ್ಕೆ ತೆರಳುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಆದರೆ, ಅಪಘಾತದ ಬಳಿಕ ಆತ ವಾಹನ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.