ರಾಯಚೂರು :ರಾಷ್ತ್ರೀಯ ಹೆದ್ದಾರಿ ಹಗರಿ ಜಡಜೇರಲಾ ರಸ್ತೆ ಕಾಮಗಾರಿಗಾಗಿ ತಾಲೂಕಿನ ರೈತರಿಂದ ವಶಪಡಿಸಿಕೊಂಡ ಭೂಮಿಗೆ ನೀಡಿರುವ ಪರಿಹಾರ ಅಲ್ಪಮೊತ್ತದಾಗಿದ್ದು, ಮಾರುಕಟ್ಟೆ ಬೆಲೆ ಅನ್ವಯ ಭೂ ಪರಿಹಾರ ನೀಡಬೇಕು ಎಂದು ಜೆಡಿಎಸ್ ಗ್ರಾಮೀಣ ಅಧ್ಯಕ್ಷ ನೀಜಾಮುದ್ದಿನ ಒತ್ತಾಯಿಸಿದ್ದರು.
ರಾಯಚೂರು : ರೈತರಿಗೆ ಮಾರುಕಟ್ಟೆ ಬೆಲೆ ಅನ್ವಯ ಭೂ ಪರಿಹಾರ ನೀಡುವಂತೆ ಒತ್ತಾಯ
ಪರಿಹಾರದ ಮೊತ್ತ ಕೇವಲ 1,92,000 ರೂ. ಮಾತ್ರ ನಿಗದಿಪಡಿಸಿ ಒಂದು ಗುಂಟೆಗೆ 4000 ರೂ. ನೀಡಲು ಮುಂದಾಗಿದೆ. ಮಾರುಕಟ್ಟೆ ದರ 50 ಲಕ್ಷ ರೂ. ಇದ್ದು, ಒಂದು ಗುಂಟೆಗೆ ₹12 ಲಕ್ಷ ಪರಿಹಾರ ನೀಡಬೇಕು..
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಗರಿ ಜಡಜೇರಲಾ ರಸ್ತೆ ಕಾಮಗಾರಿ ತಾಲೂಕಿನ ಗಿಲೇಸಗೂರು, ಯರಗೇರಾ, ಕೆರೆಬೂದೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ರೈತರಿಂದ ಭೂ ಸ್ವಾಧೀನ ಪಡಿಸಿಕೊಂಡಿದೆ.
ಆದರೆ, ಪರಿಹಾರದ ಮೊತ್ತ ಕೇವಲ 1,92,000 ರೂ. ಮಾತ್ರ ನಿಗದಿಪಡಿಸಿ ಒಂದು ಗುಂಟೆಗೆ 4000 ರೂ. ನೀಡಲು ಮುಂದಾಗಿದೆ. ಮಾರುಕಟ್ಟೆ ದರ 50 ಲಕ್ಷ ರೂ. ಇದ್ದು, ಒಂದು ಗುಂಟೆಗೆ ₹12 ಲಕ್ಷ ಪರಿಹಾರ ನೀಡಬೇಕು.
ರಸ್ತೆ ಕಾಮಗಾರಿಯಲ್ಲಿ ಒಬ್ಬ ರೈತರ ಐದು ಗುಂಟೆ ವಶಪಡಿಸಿಕೊಂಡಿದ್ದು, ಮಾರುಕಟ್ಟೆ ದರ ಅನ್ವಯ ಬೆಲೆ ನೀಡಬೇಕು ಎಂದು ಒತ್ತಾಯಿಸಿ ರೈತರೊಂದಿಗೆ ಬೀದಿಗಿಳಿದು ಹೋರಾಟದ ಜೊತೆಯಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.