ರಾಯಚೂರು:ವಿದ್ಯುತ್ ತಂತಿ ತಗುಲಿ ರೈತನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು: ವಿದ್ಯುತ್ ತಂತಿ ತಗುಲಿ ರೈತ ಸಾವು - Death of a Raichur farmer
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಬೂರನಪುರ ಗ್ರಾಮದ ಬಳಿ ವಿದ್ಯುತ್ ತಂತಿ ತಗುಲಿ ರೈತನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಯಚೂರು: ವಿದ್ಯುತ್ ತಂತಿ ತಗುಲಿ ರೈತ ಸಾವು
ಜಿಲ್ಲೆಯ ಮಾನವಿ ತಾಲೂಕಿನ ಬೂರನಪುರ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಬಾಬು ಮಹೆಬೂಬು(45) ಮೃತ ರೈತ. ಬಾಬು 4 ಎಕರೆ ಜಮೀನು ಹೊಂದಿದ್ದು, ಕೆಲಸಕ್ಕಾಗಿ ತನ್ನ ಹೊಲಕ್ಕೆ ತೆರಳಿದ್ದ. ಈ ವೇಳೆ ಮಳೆ, ಗಾಳಿಗೆ ಕೆಳಗೆ ಬಿದಿದ್ದ ವಿದ್ಯುತ್ ತಂತಿ ತಗುಲಿ ಅದರ ಹೊಡೆತಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮಾನವಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.