ರಾಯಚೂರು:ಇಲ್ಲಿನ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ 16 ಚಿನ್ನದ ಪದಕ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ನಗರದ ಯರಮರಸ್ ಕ್ಯಾಂಪ್ನಲ್ಲಿ ಎಸ್ಎಲ್ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬುಶ್ರಾ ಮತೀನ್ ಈ ವಿಶೇಷ ಸಾಧಕಿ.

ನಗರದ ಜಹೀರುದ್ದೀನ್ ಎನ್ನುವವರ ಪುತ್ರಿಯಾಗಿರುವ ಇವರು ಸಿವಿಲ್ ಇಂಜಿನಿಯರಿಂಗ್‌ನ ಎಲ್ಲಾ 8 ಸೆಮಿಸ್ಟರ್ಗಳಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಸಿವಿಲ್ ಇಂಜಿನಿಯರಿಂಗ್‌ನ ವಿವಿಧ ವಿಷಯಗಳಲ್ಲಿ ಒಟ್ಟು 16 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಬುಶ್ರಾ ಮತೀನ್ ಅವರು ತನ್ನ ಸಾಧನೆಗೆ ಕಾಲೇಜಿನ ಉಪನ್ಯಾಸಕರು, ಆಡಳಿತ ಮಂಡಳಿ, ಪೋಷಕರು ಹಾಗೂ ಸ್ನೇಹಿತರಿಗೆ ಧನ್ಯವಾದ ಹೇಳಿದ್ದು, ಮುಂದೆ ತಾನು ಯುಪಿಎಸ್ಸಿ ಎಕ್ಸಾಂ ಪಾಸ್ ಮಾಡುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಇಂದಿನಿಂದ 3 ದಿನಗಳ ಕಾಲ 'ಬೆಂಗಳೂರು - ಇಂಡಿಯಾ ನ್ಯಾನೋ' ಸಮಾವೇಶ: ಸಿಎಂ ಬೊಮ್ಮಾಯಿ ಚಾಲನೆ