ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ತಮ್ಮನ ತುಟಿ ಕಚ್ಚಿ ಗಂಭೀರ ಗಾಯಗೊಳಿಸಿದ ಅಣ್ಣ - Raichur elder brother bites small brothers lips‘

ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಗಲಾಟೆಯಲ್ಲಿ ಅಣ್ಣ ತಮ್ಮ ಕೈ ಕೈ ಮಿಲಾಯಿಸಿದ್ದು, ಅಣ್ಣ ತಮ್ಮನ ತುಟಿ ಕಚ್ಚಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Raichur elder brother bites small brothers lips
ಕ್ಷುಲ್ಲಕ ಕಾರಣಕ್ಕೆ ತಮ್ಮನ ತುಟಿ ಕಚ್ಚಿ ಗಂಭೀರ ಗಾಯಗೊಳಿಸಿದ ಅಣ್ಣ

By

Published : Jan 22, 2020, 11:47 AM IST

ರಾಯಚೂರು:ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಗಲಾಟೆಯಲ್ಲಿ ಅಣ್ಣ ತಮ್ಮ ಕೈ ಕೈ ಮಿಲಾಯಿಸಿದ್ದು, ಅಣ್ಣ ತಮ್ಮನ ತುಟಿ ಕಚ್ಚಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ತಮ್ಮನ ತುಟಿ ಕಚ್ಚಿ ಗಂಭೀರ ಗಾಯಗೊಳಿಸಿದ ಅಣ್ಣ

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಭಯ್ಯಾಪುರ ತಾಂಡದಲ್ಲಿ ಈ ಘಟನೆ ಸಂಭವಿಸಿದೆ. ತಿಪ್ಪಣ್ಣ ನಾರಾಯಣಪ್ಪ ಗಾಯಾಳು ವ್ಯಕ್ತಿಯಾಗಿದ್ದು, ಅಮರೇಶ ಉಮಲೆಪ್ಪ ತುಟಿ ಕಚ್ಚಿರುವ ವ್ಯಕ್ತಿ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ತಿಪ್ಪಣ್ಣನ ಮಗ ತನ್ನ ದೊಡ್ಡಪ್ಪನ ಮನೆಯಲ್ಲಿ ಟಿವಿ ನೋಡಲೆಂದು ಹೋಗಿದ್ದ. ರಾತ್ರಿ 10 ಗಂಟೆಯಾದರೂ ಮನೆಗೆ ಬಾರದೆ ಟಿವಿ ನೋಡುತ್ತಲೇ ಕುಳಿತುಕೊಂಡಿದ್ದ ಮಗನನ್ನು ಕರೆತರಲು ತಿಪ್ಪಣ್ಣ ಅಣ್ಣನ ಮನೆಗೆ ಹೋಗಿದ್ದಾನೆ. ಮಗನನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆತನಿಗೆ ಬೈಯುತ್ತಿದ್ದದ್ದನ್ನು ಕಂಡು ತಿಪ್ಪಣ್ಣನ ಅಣ್ಣ ಪ್ರಶ್ನಿಸಿದ್ದಾನೆ.

ಪ್ರಶ್ನೆ ಬೈಗುಳಕ್ಕೆ ತಿರುಗಿ ಕೊನೆಗೆ ಅಣ್ಣ ತಮ್ಮ ಇಬ್ಬರು ಕೈಕೈ ಮೀಲಾಯಿಸಿದ್ದಾರೆ‌. ಗಲಾಟೆಯಲ್ಲಿ ಅಮರೇಶ ಉಮಲೆಪ್ಪ ತಿಪ್ಪಣ್ಣನ ತುಟಿ ಕಚ್ಚಿರುವ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details