ಕರ್ನಾಟಕ

karnataka

ETV Bharat / state

ಹಸಿದವರಿಗೆ ಅನ್ನ ನೀಡುತ್ತಿದೆ, ಬಡವರಿಗೆ ಬಂಧುವಾಗಿದೆ ಇಫಾ ಫೌಂಡೇಶನ್​! - Raichur Efa foundation

ರಾಯಚೂರಿನಲ್ಲಿರುವ ಇಫಾ ಫೌಂಡೇಶನ್​ ಸಂಸ್ಥೆ ನಿರ್ಗತಿಕರ ಹಸಿವು ತಣಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ 2008ರಲ್ಲಿ ಆರಂಭವಾದ ಇಫಾ ಫೌಂಡೇಶನ್ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ.

ಬಡವರಿಗೆ ಬಂಧುವಾಗಿದೆ ಇಫಾ ಫೌಂಡೇಶನ್

By

Published : Aug 16, 2019, 4:54 AM IST

ರಾಯಚೂರು :ನಗರದ ಇಫಾ ( education for all) ಫೌಂಡೇಶನ್​​ ಪ್ರತಿನಿತ್ಯ ನಿರ್ಗತಿಕರ ಹಸಿವು ತಣಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ಹಲವಾರು ವರ್ಷಗಳಿಂದ ಬಡ, ನಿರ್ಗತಿಕರಿಗೆ ಮಧ್ಯಾಹ್ನ ಉಚಿತ ಊಟ ನೀಡುತ್ತಾ ಬಂದಿರುವ ಇಫಾ ಫೌಂಡೇಶನ್ ಕಚೇರಿಗೆ ನಿತ್ಯ ನೂರಾರು ಭಿಕ್ಷುಕರು, ರಿಕ್ಷಾ ಚಾಲಕರು, ವೃದ್ಧರು ಬಂದು ತಮ್ಮ ಹಸಿವು ನೀಗಿಸಿಕೊಳ್ಳುತಿದ್ದಾರೆ.

ಬಡವರಿಗೆ ಬಟ್ಟೆ ನೀಡುವ ಯೋಜನೆ:

2008ರಲ್ಲಿ ಆರಂಭವಾದ ಇಫಾ ಫೌಂಡೇಶನ್ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇತ್ತೀಚಿಗೆ wall of kindness ಎಂಬ ಯೋಜನೆ ರೂಪಿಸಿ ಸಂಘ‌ಸಂಸ್ಥೆ, ದಾನಿಗಳ ಹಾಗೂ ಸಾರ್ವಜನಿಕರಿಂದ ಉಪಯೋಗಿಸಿ ಮತ್ತೊಬ್ಬರಿಗೆ ಬಳಕೆಗೆ ಯೋಗ್ಯವಾಗುವಂತಹ ಬಟ್ಟೆ, ಪಾತ್ರೆ, ಚಪ್ಪಲಿ ಹಾಗೂ ಇತರೆ ಗೃಹ ಬಳಕೆಯ ವಸ್ತುಗಳನ್ನು ಪಡೆದು ಅವಶ್ಯಕತೆ ಇದ್ದವರಿಗೆ ನೀಡುವ ವ್ಯವಸ್ತೆ ಮಾಡುತ್ತಿದೆ.

ಬಡವರಿಗೆ ಬಂಧುವಾಗಿದೆ ಇಫಾ ಫೌಂಡೇಶನ್

ಏನಿದು ಇಫಾ ಫೌಂದೇಶನ್​

2008ರಲ್ಲಿ ಆರಂಭವಾದ ಇಫಾ ಫೌಂಡೇಶನ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಸ್ಲಂ ಜನರಿಗೆ ಉಚಿತ ಊಟ ನೀಡುವುದು, ನಿರ್ಗತಿಕ ಶವ ಸಾಗಣೆಗೆ ವಾಹನ ಸೌಲಭ್ಯ, ಉಚಿತ ಶವ ಸಂಸ್ಕಾರ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದೆ.

ಮುಂದಿನ ದಿನಗಳಲ್ಲಿ ವೃದ್ಧಾಶ್ರಮ, ಡಯಾಲಿಸಿಸ್ ಕೇಂದ್ರ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಲಿದ್ದೇವೆ ಎಂದು ಇಫಾ ಫೌಂಡೇಶನ್​​​ನ ಜನರಲ್ ಸೆಕ್ರೆಟ್ರಿ ಮೊಹಮ್ಮದ್ ಸಾಜಿದ್ ತಿಳಿಸಿದ್ದಾರೆ.

ಇಫಾ ಸಂಸ್ಥೆಗೆ ಹೈದ್ರಾಬಾದ್​ನ ಸನಿ ವೆಲ್ಫೇರ್ ಫೌಂಡೇಶನ್, ಕೆಎಸ್ಎಎಮ್ಇ ರಾಯಚೂರು, ಎಮ್ಎಮ್ಎಚ್ ಎಜುಕೇಶನಲ್ ಅ್ಯಂಡ್ ವೆಲ್ಪೇರ್ ಟ್ರಸ್ಟ್, ಎಮ್ಐಎಚ್​​ಜಿ ಬೆಂಗಳೂರು ಸೇರಿದಂತೆ ಇತರೆ ಸಂಸ್ಥೆಗಳು ಧನ ಸಹಾಯ ನೀಡುತ್ತಿವೆ.

ABOUT THE AUTHOR

...view details