ರಾಯಚೂರು: ವರದಕ್ಷಿಣೆ ತರುವಂತೆ ಪತಿ ಹಾಗೂ ಆತನ ಕುಟುಂಬಸ್ಥರು ಮಹಿಳೆಗೆ ಕಿರುಕುಳ ನೀಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಲಿಂಗಸೂಗೂರು ತಾಲೂಕಿನ ಕಾಳಾಪೂರ ಗ್ರಾಮದ ನಿವಾಸಿ ದುರುಗಪ್ಪ ಎನ್ನುವವರು ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕಳೆದ ಐದಾರು ವರ್ಷಗಳ ಹಿಂದೆ ದುರಗಪ್ಪನಿಗೆ ಸಿಂಧನೂರು ತಾಲೂಕಿನ ಗೌಡಭಾವಿ ಕ್ಯಾಂಪ್ ನಿವಾಸಿ ಮಹಿಳೆಯೊಬ್ಬರಿಗೆ ವಿವಾಹ ಮಾಡಿಕೊಡಲಾಗಿತ್ತು. ಆದ್ರೆ ಮದ್ಯ ಸೇವನೆ, ಜೂಜಾಟ ಚಟಕ್ಕೆ ಬಿದ್ದು, ಪತ್ನಿಗೆ ತವರು ಮನೆಯಿಂದ ಐದು ಲಕ್ಷ ರೂಪಾಯಿ ತರುವಂತೆ ಕಿರುಕುಳ ನೀಡಿದ್ದಾನೆ. ಜೊತೆಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡಿ ಮನೆಯಿಂದ ಹೊರಗಡೆ ಹಾಕಿದ್ದಾನೆ ಎನ್ನಲಾಗಿದೆ.
ಇನ್ನು ಪತಿಯ ಕಿರುಕುಳದಿಂದ ಬೇಸತ್ತು ಮಹಿಳೆ ತವರು ಮನೆಗೆ ಹೋಗಿ ನೆಲೆಸಿದ್ದಾಳೆ. ಆದರೂ ಪತಿ, ಆತನ ಸಹೋದರರು ಗೌಡಭಾವಿ ಕ್ಯಾಂಪ್ ಗೆ ಬಂದು ಮಹಿಳೆ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿ ಹೋಗಿದ್ದರೆ ಎನ್ನಲಾಗಿದೆ.
ಮಹಿಳೆ ಕಿರುಕುಳ ತಾಳಲಾರದೇ ಇದೀಗ ಬಳಗಾನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಕಲಂ-143, 147, 498 (ಎ), 354, 323, 504, 506, 109 ಸಹಿತ 149 ಐಪಿಸಿ ಮತ್ತು ಕಲಂ-3, 4 ಡಿ.ಪಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.