ರಾಯಚೂರು: ರಸ್ತೆಗಳ ದುಸ್ಥಿತಿ ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಯಿಂದ, ಜಿಲ್ಲೆಯಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಮರಳು ಮತ್ತು ಭತ್ತ ಸಾಗಣೆಯ ವಾಹನಗಳು ಜಿಲ್ಲೆಯಲ್ಲಿ ಹೆಚ್ಚಾಗಿ ಸಂಚರಿಸುತ್ತಿರುವುದರಿಂದ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ.
ಅಪಘಾತಗಳು ಸಂಭವಿಸಿದಾಗ ಬಹುತೇಕರು ಉತ್ತಮ ಚಿಕಿತ್ಸೆ ದೊರೆಯುತ್ತದೆ ಎನ್ನುವ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದು, ಅಲ್ಲಿನ ದುಬಾರಿ ವೆಚ್ಚವನ್ನು ಭರಿಸಲು ಸಂಕಷ್ಟ ಎದುರಿಸುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದರೂ ತಕ್ಷಣಕ್ಕೆ ತಜ್ಞ ವೈದ್ಯರು ದೊರೆಯುವುದಿಲ್ಲ ಎನ್ನುವ ಅಪವಾದದಿಂದ, ಜನರು ಖಾಸಗಿ ಆಸ್ಪತ್ರೆಗಳತ್ತ ಧಾವಿಸುವುದು ಕಂಡು ಬರುತ್ತಿದೆ.
ಬಾಲಂಕು ಆಸ್ಪತ್ರೆಯ ವೈದ್ಯ ಡಾ. ಶ್ರೀಧರ ರೆಡ್ಡಿ ಜಿಲ್ಲೆಯಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ ಲಭ್ಯವಿಲ್ಲದ ಕಾರಣ, ಅನಿವಾರ್ಯವಾಗಿ ಬೆಂಗಳೂರು, ಹೈದರಾಬಾದ್ನ ಆಸ್ಪತ್ರೆಗಳಿಗೆ ಹೋಗವ ಪರಿಸ್ಥಿತಿ ಎದುರಾಗಿದೆ. ಬಹುತೇಕರು ಅಪಘಾತ ವಿಮೆ ಹೊಂದಿರದ ಕಾರಣ, ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆಯಿದೆ.
ಈ ಕುರಿತು ಬಾಲಂಕು ಆಸ್ಪತ್ರೆಯ ಡಾ. ಶ್ರೀಧರ ರೆಡ್ಡಿ ಮಾತನಾಡಿ, ಅಪಘಾತ ಸಂಬಂಧಿಸಿದ ಚಿಕಿತ್ಸೆಗೆ ಬಂದ ಕೂಡಲೇ ಮೊದಲು ಪ್ರಥಮ ಚಿಕಿತ್ಸೆಯನ್ನ ನೀಡಿ ಜೀವ ಉಳಿಸುವ ಕೆಲಸ ಮಾಡಲಾಗುವುದು. ಬಳಿಕ ಶಸ್ತ್ರಚಿಕಿತ್ಸೆ ಬೇಕಾದಲ್ಲಿ ಮೊದಲ ಚಿಕಿತ್ಸೆ ವೆಚ್ಚವನ್ನು ತಿಳಿಸಿ, ಮುಂದಿನ ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.