ಕರ್ನಾಟಕ

karnataka

ETV Bharat / state

ಸಿಟಿ ರೌಂಡ್ಸ್ ಹಾಕಿದ ರಾಯಚೂರು ಜಿಲ್ಲಾಧಿಕಾರಿ - ರಾಯಚೂರು ಜಿಲ್ಲಾಧಿಕಾರಿ

ಕಳೆದ ಬಾರಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟಾಗ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಈ ಬಾರಿ ಟ್ರಾಫಿಕ್ ಸಮಸ್ಯೆ ತಲೆ‌ದೋರದಂತೆ ಭಾರೀ ವಾಹನಗಳು ನಗರದಲ್ಲಿ ಪ್ರವೇಶಿಸದಂತೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಿಟಿ ರೌಂಡ್ಸ್ ಹಾಕಿದ ರಾಯಚೂರು ಜಿಲ್ಲಾಧಿಕಾರಿ
ಸಿಟಿ ರೌಂಡ್ಸ್ ಹಾಕಿದ ರಾಯಚೂರು ಜಿಲ್ಲಾಧಿಕಾರಿ

By

Published : May 23, 2021, 11:16 AM IST

Updated : May 23, 2021, 12:38 PM IST

ರಾಯಚೂರು: ಇಂದು ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 2 ಗಂಟೆಯವರೆಗೆ ಅಗತ್ಯ ವಸ್ತುಗಳನ್ನ ಖರೀದಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಟ್ಟಿದೆ. ಹೀಗಾಗಿ ಸಿಟಿಯಲ್ಲಿ ವಸ್ತುಸ್ಥಿತಿಯನ್ನ ಅವಲೋಕಿಸಲು ಖುದ್ದಾಗಿ ನಗರದ ತರಕಾರಿ ಮಾರುಕಟ್ಟೆ, ಬಟ್ಟೆ ಬಜಾರ್, ಹರಿಹರ ರೋಡ್, ತೀನ್ ಕಂದಿಲ್ ಸೇರಿದಂತೆ ನಾನಾ ಕಡೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ವೀಕ್ಷಣೆ ಮಾಡಿದ್ರು.

ಸಿಟಿ ರೌಂಡ್ಸ್ ಹಾಕಿದ ರಾಯಚೂರು ಜಿಲ್ಲಾಧಿಕಾರಿ

ಈ ವೇಳೆ ಆದೇಶದಂತೆ ಅಗತ್ಯ ವಸ್ತುಗಳ ಅಂಗಡಿಗಳಿಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು. ಕೊರೊನಾ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿ, ತುರ್ತು ಸೇವೆಗಳಿಗೆ ಅನುಮತಿ ನೀಡಲಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮೂರು ದಿನಗಳಿಗೆ ಒಮ್ಮೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟಾಗ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಈ ಬಾರಿ ಟ್ರಾಫಿಕ್ ಸಮಸ್ಯೆ ತಲೆ‌ದೋರದಂತೆ ಭಾರೀ ವಾಹನಗಳು ನಗರದಲ್ಲಿ ಪ್ರವೇಶಿಸದಂತೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Last Updated : May 23, 2021, 12:38 PM IST

ABOUT THE AUTHOR

...view details