ರಾಯಚೂರು: ರಾಯಚೂರು ಡಿಡಿಎಲ್‌ಆರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೋರ್ವರು ಕಳೆದ ಮೂರ್ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಡಿಡಿಎಲ್‌ಆರ್ ಕಚೇರಿಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಶಿವಪ್ಪ ಎಂಬುವರು ಕಣ್ಮರೆಯಾಗಿದ್ದಾರೆ.
ಆ.24ನೇ ತಾರೀಕಿನಂದು ಶಿವಪ್ಪ ಕಾಣೆಯಾಗಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಶಿವಪ್ಪನ ಪತ್ನಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮೊದಲು ಸಹಾಯಕ ಆಯುಕ್ತರ ಕಚೇರಿಯಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ಪ ಕಾಣೆಯಾಗಿದ್ದಾರೆ.