ರಾಯಚೂರು:ಜಿಲ್ಲೆಯ ಸಿರವಾರ ತಹಶೀಲ್ದಾರ್ ಅವರನ್ನು ನಿಂದನೆ ಮಾಡಿದ ಗುಡುದೂರಿನ ಉಪ ತಹಶೀಲ್ದಾರರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ ಮಾಡಿದ್ದಾರೆ.
ಕರ್ತವ್ಯಲೋಪ ಆರೋಪ: ಗುಡುದೂರಿನ ಉಪ ತಹಶೀಲ್ದಾರ್ ಅಮಾನತು - ತಹಶೀಲ್ದಾರ್ ಶೃತಿ ಕೆ
ಸಿರವಾರ ತಹಶೀಲ್ದಾರ್ ಅವರನ್ನು ನಿಂದನೆ ಮಾಡಿರುವ ಆರೋಪದಡಿ ಗುಡುದೂರಿನ ಉಪ ತಹಶೀಲ್ದಾರರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ ನೀಡಿದ್ದಾರೆ.
ಗುಡುದೂರಿನ ಉಪತಹಶೀಲ್ದಾರರನ್ನು ಅಮಾನತು ಮಾಡಿದ ರಾಯಚೂರು ಡಿಸಿ
ಗುಡದೂರಿನ ರಾಮನಗೌಡ ಅಮಾನತುಗೊಂಡಿರುವ ಉಪ ತಹಶೀಲ್ದಾರ್ ಆಗಿದ್ದು, ಸಿರವಾರ ತಹಶೀಲ್ದಾರ್ ಕಚೇರಿಗೆ 2020 ಮೇ 6ರಂದು ಕುಡಿದ ಮತ್ತಿನಲ್ಲಿ ಬಂದು, ತಹಶೀಲ್ದಾರ್ ಶೃತಿ ಕೆ. ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ಜತೆಗೆ ಕೋವಿಡ್-19 ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು, ಕರ್ತವ್ಯದಲ್ಲಿ ಲೋಪವೆಸಗಿ, ದುರ್ನಡತೆ ತೋರಿಸಿದ್ದಾರಂತೆ. ಹಾಗಾಗಿ ವಿಚಾರಣೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.