ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ತಗ್ಗಿದ ಕೊರೊನಾ - ಲಾಕ್​ಡೌನ್​ ಸಡಿಲಿಕೆ : ಡಿಸಿ ಆರ್. ವೆಂಕಟೇಶ್ ಕುಮಾರ್ - raichur unlock news

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಪಾಸಿಟಿವಿಟಿ ರೇಟ್​​ ಶೇ 2 ರಿಂದ 3ರಷ್ಟಿದ್ದು, ಸರ್ಕಾರದ ಆದೇಶದ್ವನಯ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

raichur dc r venkatesh kumar
ಡಿಸಿ ಆರ್. ವೆಂಕಟೇಶ್ ಕುಮಾರ್

By

Published : Jun 12, 2021, 5:29 PM IST

ರಾಯಚೂರು:ಜಿಲ್ಲೆಯಲ್ಲಿ ಜೂ. 14ರಿಂದ ಲಾಕ್‌ಡೌನ್ ಸಡಿಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಈ ಹಿನ್ನೆಲೆ, ಜೂ.14ರಿಂದ 20ರವರೆಗೆ ಬೆಳಗ್ಗೆ 6 ರಿಂದ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಒದಗಿಸಲಾಗುವುದು ಎಂದರು.

ಡಿಸಿ ಆರ್. ವೆಂಕಟೇಶ್ ಕುಮಾರ್

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ವೈರಸ್ ಪ್ರಮಾಣ ಶೇ 5ಕ್ಕಿಂತ ಕಡಿಮೆಯಾಗಿದ್ದು, ಸದ್ಯ ಶೇ 2 ರಿಂದ 3ರಷ್ಟಿರುವುದರಿಂದ ಸರ್ಕಾರದ ಆದೇಶದ್ವನಯ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಲಾಗುತ್ತಿದೆ. ಈ ಮೊದಲು ಜಿಲ್ಲೆಯಲ್ಲಿ ವಾರದಲ್ಲಿ ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿ, ಅಗತ್ಯವಸ್ತು ಖರೀದಿಗೆ ಅವಕಾಶ ನೀಡಿತ್ತು. ಸೋಂಕನ್ನು ಕಡಿಮೆ ಮಾಡಲು ಜಿಲ್ಲಾಡಳಿತದ ನಡೆ ಹಳ್ಳಿಗಳ ಕಡೆ ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದೀಗ ಲಾಕ್​ಡೌನ್​ ಸಡಿಲಿಕೆ ಮಾಡಲಾಗುತ್ತಿದ್ದು, ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಕೇವಲ ಕಿರಾಣಿ, ತರಕಾರಿ, ಹಣ್ಣು, ಹಾಲು, ಮಾಂಸ, ಗೊಬ್ಬರ, ಬಿತ್ತನೆ ಬೀಜ, ಸ್ಟೀಲ್, ಸಿಮೆಂಟ್ ಅಂಗಡಿಗಳನ್ನು ಓಪನ್ ಮಾಡುವುದಕ್ಕೆ ಸಮ್ಮತಿಸಿ, ಉಳಿದ ಅಂಗಡಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೋಟೆಲ್, ಮದ್ಯದ ಅಂಗಡಿಗಳಲ್ಲಿ ಕೇವಲ ಪಾರ್ಸೆಲ್‌ಗೆ ಅವಕಾಶ ನೀಡಲಾಗುತ್ತಿದೆ. ಬ್ಯಾಂಕ್, ಅಂಚೆ ಕಚೇರಿಗಳೂ ಕೂಡಾ ಇದೇ ಅಧಿವಯಲ್ಲಿ ಮಾತ್ರ ಕಾರ್ಯನಿರ್ವಹಿಸಲಿವೆ. ಕಾರ್ಖಾನೆಗಳಲ್ಲಿ ಶೇ 50ರಷ್ಟು ಸಿಬ್ಬಂದಿ ಮಾತ್ರ ಬಳಸಿಕೊಂಡು ಕಾರ್ಯನಿರ್ವಹಿಸಬಹುದಾಗಿದೆ.

ಇದನ್ನೂ ಓದಿ:ಸಿಎಂ ತವರೂರಿನವರು ಬೆಳಗಾವಿಯಲ್ಲಿ ಲಾಕ್; ಕೇಳುವವರಿಲ್ಲ ಹಕ್ಕಿ -ಪಿಕ್ಕಿ ಸಮುದಾಯದವರ ಗೋಳು!

ಟ್ಯಾಕ್ಸಿ, ಆಟೋಗಳಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದಾಗಿದ್ದು, ಶನಿವಾರ ಮತ್ತು ಭಾನುವಾರ ಅಗತ್ಯವಸ್ತುಗಳ ಅಂಗಡಿ ತೆರೆದಿದ್ದರೂ ಜನರು ಹೊರಗೆ ಬರುವುದಕ್ಕೆ ನಿರ್ಬಂಧ ಹೇರಲಾಗಿದೆ. ಮದುವೆ, ಜಾತ್ರೆ, ಸಂತೆಗಳನ್ನು ನಡೆಸಲು ಅನುಮತಿ ಇಲ್ಲವೆಂದು ತಿಳಿಸಿದ್ರು.

ABOUT THE AUTHOR

...view details