ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಯಚೂರು ಜಿಲ್ಲಾಧಿಕಾರಿ ವಿವಿಧ ಇಲಾಖಾ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.
ಆರೋಗ್ಯ ಇಲಾಖೆ, ರಿಮ್ಸ್ ಆಸ್ಪತ್ರೆ, ಆರ್ ಟಿಒ, ಅಬಕಾರಿ, ಸ್ಥಳೀಯ ನಗರಸಭೆ, ಪುರಸಭೆ ಅಧಿಕಾರಿಗಳು, ತಹಶೀಲ್ದಾರ್ಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಜೊತೆ ಡಿಸಿ ತುರ್ತು ಸಭೆ ಕರೆದು, ಕೊರೊನಾ ವೈರಸ್ ಕುರಿತಂತೆ ಕೈಗೊಳಬೇಕಾದ ಮುಂಜಾಗ್ರತ ಕ್ರಮಗಳು ಮತ್ತು ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವುದರ ಕುರಿತಂತೆ ಚರ್ಚೆ ನಡೆಸಿದ್ರು.
ಜಿಲ್ಲಾಧಿಕಾರಿಯಿಂದ ತುರ್ತು ಸಭೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ವೆಂಕಟೇಶ ಕುಮಾರ್, ಹೈದರಾಬಾದ್ನಲ್ಲಿ ವೈರಸ್ ಕಂಡು ಬಂದಿದೆ. ರಾಯಚೂರು ಜಿಲ್ಲೆಯಿಂದ ಹೈದರಾಬಾದ್ಗೆ ಹಲವು ಜನರು ಸಂಚಾರ ಮಾಡುತ್ತಾರೆ. ಸೋಂಕು ಹರಡದಂತೆ ಗಡಿ ಭಾಗದಲ್ಲಿ ಮೂರು ಚೆಕ್ ಪೋಸ್ಟ್ಗಳು, ಕೇಂದ್ರೀಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಅಬಕಾರಿ, ಆರ್ಟಿಒ, ಪೊಲೀಸ್ ಚೆಕ್ ಪೋಸ್ಟ್ಗಳಲ್ಲಿ ಆರೋಗ್ಯ ತಪಾಸಣೆ ನಡೆಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಸೋಂಕು ಕಂಡು ಬಂದಲ್ಲಿ ಚಿಕಿತ್ಸೆ ನೀಡಲು ರಿಮ್ಸ್ ಆಸ್ಪತ್ರೆ ಹಾಗೂ ನವೋದಯ ಆಸ್ಪತ್ರೆಯಲ್ಲಿ ತಲಾ ಐದು ಬೆಡ್ಗಳು ಮತ್ತು ಕೊರೊನಾ ವೈರಸ್ ಚಿಕಿತ್ಸೆ ಘಟಕಗಳನ್ನ ಸ್ಥಾಪಿಸಲಾಗಿದೆ ಎಂದು ವಿವರಿಸಿದ್ರು.