ಕರ್ನಾಟಕ

karnataka

ETV Bharat / state

100 ಹಾಸಿಗೆಯುಳ್ಳ ಕೋವಿಡ್​ ಸೆಂಟರ್​ ತೆರೆಯುವಂತೆ ರಾಯಚೂರು ಡಿಸಿ ಪತ್ರ - ಕರ್ನಾಟಕ ವಿದ್ಯುತ್ ನಿಗಮಕ್ಕೆ ರಾಯಚೂರು ಡಿಸಿ ಪತ್ರ

ತುರ್ತು ವೈದ್ಯಕೀಯ ವ್ಯವಸ್ಥೆಯುಳ್ಳ 25 ICU ಒಳಗೊಂಡತೆ 100 ಆಕ್ಸಿಜನ್ ವ್ಯವಸ್ಥೆಯುಳ್ಳ ಬೆಡ್‌ಗಳ ಕೋವಿಡ್​ ಕೇರ್​ ಕೇಂದ್ರವನ್ನು ತುರ್ತಾಗಿ ಕೋರಲಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಬೆಂಗಳೂರು ಇವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮಕ್ಕೆ ರಾಯಚೂರು ಡಿಸಿ ಪತ್ರ
ಕರ್ನಾಟಕ ವಿದ್ಯುತ್ ನಿಗಮಕ್ಕೆ ರಾಯಚೂರು ಡಿಸಿ ಪತ್ರ

By

Published : May 16, 2021, 9:05 AM IST

ರಾಯಚೂರು:ತಾಲೂಕಿನ ಶಕ್ತಿನಗರ ಆರ್‌ಟಿಪಿಎಸ್, ವೈಟಿಪಿಎಸ್ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲು ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 100 ಹಾಸಿಗೆಯುಳ್ಳ ಕೋವಿಡ್​ ಕೇರ್​ ಸೆಂಟರ್​ ತೆರೆಯುವಂತೆ ಜಿಲ್ಲಾಧಿಕಾರಿ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿರ್ದೇಶಕರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮಕ್ಕೆ ರಾಯಚೂರು ಡಿಸಿ ಪತ್ರ

ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ಅಗತ್ಯವಿರುವ ಹೆಚ್ಚುವರಿ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ. ಹೀಗಾಗಿ ವಿಪತ್ತು ‌ನಿರ್ಹವಣೆ ಕಾಯ್ದೆ 2005 ಕಲಂ 34 (M) ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅವಶ್ಯವಿದೆ. ತುರ್ತು ವೈದ್ಯಕೀಯ ವ್ಯವಸ್ಥೆಯುಳ್ಳ 25 ICU ಒಳಗೊಂಡತೆ 100 ಆಕ್ಸಿಜನ್ ವ್ಯವಸ್ಥೆಯುಳ್ಳ ಬೆಡ್‌ಗಳ ಕೋವಿಡ್​ ಕೇರ್​ ಕೇಂದ್ರವನ್ನು ತುರ್ತಾಗಿ ಕೋರಲಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಬೆಂಗಳೂರು ಇವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ : ಕೋವಿಡ್​​ ಹೊಡೆತಕ್ಕೆ ಕಳೆಗುಂದಿದ ಮಣ್ಣಿನ ಮಡಿಕೆಗಳು

For All Latest Updates

ABOUT THE AUTHOR

...view details