ಕರ್ನಾಟಕ

karnataka

ETV Bharat / state

ರಾಯಚೂರು: ಇಂದು 216 ಕೊರೊನಾ ಪ್ರಕರಣಗಳು ದೃಢ - ಕೋವಿಡ್ ಕೇರ್ ಸೆಂಟರ್

ರಾಯಚೂರು ತಾಲೂಕಿನಲ್ಲಿ 88, ಮಾನವಿ 27, ಲಿಂಗಸೂಗೂರು 25, ಸಿಂಧನೂರು 32, ದೇವದುರ್ಗದಲ್ಲಿ 44 ಪ್ರಕರಣಗಳು ಇಂದು ವರದಿಯಾಗಿವೆ.

raichur
raichur

By

Published : Sep 9, 2020, 8:17 PM IST

ರಾಯಚೂರು:ಜಿಲ್ಲೆಯಲ್ಲಿ ಇಂದು 216 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8792ಕ್ಕೆ ತಲುಪಿದೆ.

ರಾಯಚೂರು ತಾಲೂಕಿನಲ್ಲಿ 88, ಮಾನವಿ 27, ಲಿಂಗಸೂಗೂರು 25, ಸಿಂಧನೂರು 32, ದೇವದುರ್ಗದಲ್ಲಿ 44 ಪ್ರಕರಣಗಳು ಇಂದು ವರದಿಯಾಗಿವೆ.

ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ 6914 ಮಂದಿ ರೋಗದಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಇನ್ನುಳಿದ 1766 ಪ್ರಕರಣಗಳು ಸಕ್ರಿಯವಾಗಿವೆ. ಇಂದು 3 ಸೋಂಕಿತರ ಮೃತಪಡುವ ಮೂಲಕ ಮೃತರ ಸಂಖ್ಯೆ 112ಕ್ಕೆ ಏರಿಕೆಯಾಗಿದೆ.

ಪತ್ತೆಯಾಗಿರುವ ಸೋಂಕಿತರನ್ನು ರೋಗದ ಗುಣಲಕ್ಷಣದ ಆಧಾರದ ಮೇಲೆ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆ ಮತ್ತು ಸ್ವಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸುವ ಮೂಲಕ ಚಿಕಿತ್ಸೆ ನೀಡಲಾಗಿತ್ತಿದ್ದು, ಸೋಂಕಿತರ ಸಂಪರ್ಕಗಳನ್ನ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details