ರಾಯಚೂರು:ಜಿಲ್ಲೆಯ ದಿನ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ನಿನ್ನೆಯವರೆಗೆ 473 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 400 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮೂಲಕ ನಿಗಾ ವಹಿಸಲಾಗಿದೆ.
ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 11,385 ಜನರನ್ನ ಇರಿಸಲಾಗಿತ್ತು. ಇದರಲ್ಲಿ 11210 ಜನರನ್ನ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿದ್ದು, 175 ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. 3,764 ಜನ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದೆ.
ಕೊರೊನಾ ಲಾಕ್‌ಡೌನ್ ಶುರುವಾದಾಗಿನಿಂದ 22,701 ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. 20,918 ವರದಿಗಳು ನೆಗೆಟಿವ್ ಬಂದಿವೆ. ಇನ್ನುಳಿದ 1304 ಜನರ ವರದಿ ಬರುವುದು ಬಾಕಿ ಉಳಿದಿದೆ. ನಾಲ್ಕು ಸಾರಿ ಪ್ರಕರಣ ಗಳಿದ್ದು, 312 ಐಎಲ್‌ಐ ಪ್ರಕರಣ ವರದಿಯಾಗಿವೆ.
ಜಿಲ್ಲೆಯ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಗುಂಪು - ಗುಂಪಾಗಿ ವ್ಯಾಪಾರ ವಹಿವಾಟು ನಡೆಸುವವರ ವಿರುದ್ದ ಪ್ರಕರಣ ದಾಖಲಿಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮಾಸ್ಕ್ ಧರಿಸದ ಬೈಕ್ ಸವಾರರಿಗೆ ದಂಡ ವಿಧಿಸಿ, ಮಾಸ್ಕ್ ವಿತರಿಸುವುದು, ಜಾಗೃತಿ ಮೂಡಿಸುವ ಕೆಲಸ ಸಹ ಪೊಲೀಸರು ಮಾಡುತ್ತಿದ್ದಾರೆ
ಯಾದಗಿರಿ ಮೂಲದ ವ್ಯಕ್ತಿ ಜಿಲ್ಲೆಯ ಸಿರವಾರ ಪಟ್ಟಣದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ. ವ್ಯಕ್ತಿ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆ ಕೊಂಡೊಯ್ಯುವ ವೇಳೆ ದಾರಿ ಮದ್ಯೆ ಸಾನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ಗಂಟಲು ಮಾದರಿಯ ಟ್ರೂ ನ್ಯಾಟ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದ್ದು, ಇದೀಗ ಆರ್‌ಟಿಪಿಸಿಆರ್ ಪರೀಕ್ಷೆ ಕೇಂದ್ರಕ್ಕೆ ರವಾನಿಸಲಾಗಿದ್ದು, ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಈ ಪ್ರಕರಣ ಸಿರವಾರ ಪಟ್ಟಣದ ಜನತೆಯಲ್ಲಿ ಆತಂಕ ಮೂಡಿಸಿದ್ದು, ವ್ಯಕ್ತಿ ಓಡಾಡಿರುವ ಸ್ಥಳವನ್ನ ಸೀಲ್‌ಡೌನ್ ಮಾಡಿ, ಕಂಟೇನ್ಮೆಂಟ್ ಜೋನ್ ಘೋಷಣೆ ಮಾಡಲಾಗಿದೆ. ಈ ಸಂಪರ್ಕದಲ್ಲಿದ್ದ 4 ಜನರನ್ನ ಕ್ವಾರಂಟೈನ್ ಮಾಡಿ, ಉಳಿದ ಪ್ರಾಥಮಿಕ ಸಂಪರ್ಕಗಳನ್ನ ಪತ್ತೆ ಮಾಡಲಾಗುತ್ತಿದೆ.