ರಾಯಚೂರು:ಜಿಲ್ಲೆಯಲ್ಲಿ ಇಂದು 138 ಕೊರೊನಾ ಪಾಸಿಟಿವ್ ಪ್ರಕರಣಗಳ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 11,531ಕ್ಕೆ ತಲುಪಿದೆ. ರಾಯಚೂರು ತಾಲೂಕಿನಲ್ಲಿ 40, ಮಾನವಿ 18, ಲಿಂಗಸುಗೂರು 32, ಸಿಂಧನೂರು 24, ದೇವದುರ್ಗದಲ್ಲಿ 24 ಪ್ರಕರಣಗಳು ಪತ್ತೆಯಾಗಿವೆ.
ರಾಯಚೂರು: ಜಿಲ್ಲೆಯಲ್ಲಿಂದು 138 ಕೊರೊನಾ ಪಾಸಿಟಿವ್ ಪ್ರಕರಣಗಳ ಪತ್ತೆ - Raichur latest news
ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಮಾಹಿತಿ ಹೀಗಿದೆ.
ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ 9,781 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ. ಇನ್ನುಳಿದ 1,614 ಪ್ರಕರಣಗಳು ಸಕ್ರಿಯವಾಗಿವೆ. ಇಂದು ಒಬ್ಬರು ಸೋಂಕಿನಿಂದ ಮೃತಪಡುವ ಮೂಲಕ ಮೃತರ ಸಂಖ್ಯೆ 136ಕ್ಕೆ ಏರಿಕೆಯಾಗಿದೆ.
ರಿಮ್ಸ್ ಹಾಗೂ ಓಪೆಕ್ ಕೋವಿಡ್ ಆಸ್ಪತ್ರೆಯಲ್ಲಿ 291 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತಾಲೂಕಿನ ಸ್ವಾಂಸ್ಥಿಕ ಕ್ವಾರಂಟೈನ್ನಲ್ಲಿ 75 ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎನ್ಎಂಸಿಹೆಚ್, ಖಾಸಗಿ ಕೋವಿಡ್ ಆಸ್ಪತ್ರೆ, ಹೋಟೆಲ್ ಕ್ವಾರೆಂಟೈನ್ನಲ್ಲಿ 176 ಜನ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಕ್ವಾರಂಟೈನ್ನಲ್ಲಿ 1,072 ಇದ್ದಾರೆ. ಇಂದು ಪತ್ತೆಯಾಗಿರುವ ಸೋಂಕಿತರ ಸಂಪರ್ಕಗಳನ್ನ ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತಿದೆ.