ರಾಯಚೂರು:ಜಿಲ್ಲೆಯಲ್ಲಿ ಇಂದು 94 ಕೊರೊನಾ ಪಾಸಿಟಿವ್ ಪ್ರಕರಣಗಳ ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 10917ಕ್ಕೆ ತಲುಪಿದೆ. ರಾಯಚೂರು ತಾಲೂಕಿನಲ್ಲಿ 39, ಮಾನವಿ 11, ಲಿಂಗಸೂಗೂರು 6, ಸಿಂಧನೂರು 18, ದೇವದುರ್ಗದಲ್ಲಿ 20 ಪ್ರಕರಣಗಳು ಪತ್ತೆಯಾಗಿವೆ.
ರಾಯಚೂರು ಜಿಲ್ಲೆಯಲ್ಲಿಂದು 94 ಕೊರೊನಾ ಪಾಸಿಟಿವ್ ಕೇಸ್ ಪತ್ತೆ - Corona Positive Cases
ರಾಯಚೂರು ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ
![ರಾಯಚೂರು ಜಿಲ್ಲೆಯಲ್ಲಿಂದು 94 ಕೊರೊನಾ ಪಾಸಿಟಿವ್ ಕೇಸ್ ಪತ್ತೆ Raichur corona report](https://etvbharatimages.akamaized.net/etvbharat/prod-images/768-512-8937971-940-8937971-1601044377856.jpg)
ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ 9,145 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಇನ್ನುಳಿದ 1,639 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿನಿಂದ ಇಲ್ಲಿಯವರೆಗೆ 133 ಜನ ಮೃತಪಟ್ಟಿದ್ದಾರೆ.
ರಿಮ್ಸ್, ಓಪೆಕ್ ಕೋವಿಡ್ ಆಸ್ಪತ್ರೆಯಲ್ಲಿ 332 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತಾಲೂಕಿನ ಸ್ವಾಂಸ್ಥಿಕ ಕ್ವಾರಂಟೈನ್ನಲ್ಲಿ 91 ಜನರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎನ್ಎಂಸಿಹೆಚ್, ಖಾಸಗಿ ಕೋವಿಡ್ ಆಸ್ಪತ್ರೆ, ಹೋಟೆಲ್ ಕ್ವಾರೆಂಟೈನ್ನಲ್ಲಿ 186 ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಕ್ವಾರಂಟೈನ್ನಲ್ಲಿ 1030 ಇದ್ದಾರೆ. ಇಂದು ಪತ್ತೆಯಾಗಿರುವ ಸೋಂಕಿತರ ಸಂಪರ್ಕಗಳನ್ನ ಸಂಗ್ರಹಿಸುವ ಕಾರ್ಯ ನಡೆಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.