ರಾಯಚೂರು :ವಿಶೇಷಚೇತನ ವ್ಯಕ್ತಿಯೊಬ್ಬರಿಗೆ ಬಸ್ ಕಂಡಕ್ಟರ್ ಸಹಾಯ ಮಾಡಿ ಮಾನವೀಯತೆ ಮೆರೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಕಲಚೇತನ ವ್ಯಕ್ತಿಗೆ ಸಹಾಯ.. ಕಂಡಕ್ಟರ್ ಸಾಹೇಬ್ರೇ, ಎಂಥಾ ಗುಣಾ ರೀ ನಿಮ್ದು! - ರಾಯಚೂರಿನ ಬಸ್ ಕಂಡಕ್ಟರ್
ಕಂಡಕ್ಟರ್ ಆ ವ್ಯಕ್ತಿಯನ್ನು ಎತ್ತಿಕೊಂಡು ಆತ ತೆರಳಬೇಕಾದ ಸ್ಥಳಕ್ಕೆ ತಂದು ಬಿಟ್ಟಿದ್ದಾರೆ. ಮಾನವೀಯತೆ ತೋರಿದ ಕಂಡಕ್ಟರ್‌ಗೆ ನೆಟಿಜೆನ್ಸ್ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ..
ಬಸ್ ಕಂಡಕ್ಟರ್ ಗುರುಲಿಂಗಪ್ಪ ದೇವರಮನಿ ಎಂಬುವರೇ ಸಹಾಯ ಮಾಡಿದವರು. ಆಂಧ್ರದಿಂದ ವಿಶೇಷ ಚೇತನ ವ್ಯಕ್ತಿಯೊಬ್ಬರು ಮಂತ್ರಾಲಯಕ್ಕೆ ಹೋಗಲು ರಾಯಚೂರಿಗೆ ಬಂದಿದ್ದರು. ಮಂತ್ರಾಲಯಕ್ಕೆ ತೆರಳುವ ಬಸ್ ನಿಲ್ದಾಣದ ಪಾಯಿಂಟ್ನಲ್ಲಿ ನಿಲುಗಡೆ ಮಾಡಿರಲಿಲ್ಲ. ಹಾಗಾಗಿ ಬಸ್ ಇರುವ ಸ್ಥಳಕ್ಕೆ ತೆರಳುವುದು ಕಷ್ಟವಾಗಿತ್ತು.
ಇದನ್ನು ಕಣ್ಣಾರೆ ಕಂಡ ಕಂಡಕ್ಟರ್ ಗುರುಲಿಂಗಪ್ಪ, ತಾವೇ ವಿಶೇಷಚೇತನ ವ್ಯಕ್ತಿಯನ್ನು ಎತ್ತಿಕೊಂಡು ಹೋಗಿ ಆತ ತೆರಳಬೇಕಾದ ಸ್ಥಳಕ್ಕೆ ಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲ, ಮಾನವೀಯತೆ ತೋರಿದ ಕಂಡಕ್ಟರ್‌ಗೆ ನೆಟಿಜೆನ್ಸ್ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ.