ರಾಯಚೂರು: ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಪತ್ತೆ ಹಚ್ಚಲು ನಗರದಾದ್ಯಂತ ನಾಳೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲು ಡಿಸಿ ವೆಂಕಟೇಶ್ ಕುಮಾರ್ ಆದೇಶಿಸಿದ್ದಾರೆ.
ನಾಳೆ ರಾಯಚೂರು ಸಂಪೂರ್ಣ ಲಾಕ್‌ಡೌನ್ : ಜಿಲ್ಲಾಧಿಕಾರಿ ಆದೇಶ - ರಾಯಚೂರು ಸಂಪೂರ್ಣ ಲಾಕ್‌ಡೌನ್
ರಾಯಚೂರು ಜಿಲ್ಲೆಯಲ್ಲಿ 6 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಪತ್ತೆ ಹಚ್ಚಲು ನಾಳೆ ಒಂದು ದಿನದ ಮಟ್ಟಿಗೆ ನಗರದಾದ್ಯಂತ ಸಂಪೂರ್ಣ ಲಾಕ್‌ಡೌನ್ ಆದೇಶಿಸಲಾಗಿದೆ.
ಮೇ.19ರಂದು ರಾಯಚೂರು ಸಂಪೂರ್ಣ ಲಾಕ್‌ಡೌನ್: ಜಿಲ್ಲಾಧಿಕಾರಿ ಆದೇಶ
ಜಿಲ್ಲೆಯಲ್ಲಿ ಒಟ್ಟು 6 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ನಗರದಲ್ಲಿ 3 ಮೂವರು ಹಾಗೂ ಸುಲ್ತಾನಪುರದ ಓರ್ವ ವಲಸೆ ಕಾರ್ಮಿಕನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಮಾಹಿತಿ ಪತ್ತೆ ಹಚ್ಚಲು ಒಂದು ದಿನ ಮಟ್ಟಿಗೆ ಲಾಕ್‌ಡೌನ್ ಜಾರಿ ಮಾಡಲು ನಿರ್ಧರಿಸಲಾಗಿದೆ.
ಲಾಕ್‌ಡೌನ್ ವೇಳೆ ಆಸ್ಪತ್ರೆಗಳು, ಔಷಧಿ ಮಳಿಗೆಗಳು, ತುರ್ತು ವೈದ್ಯಕೀಯ ಸೇವೆ, ಪೆಟ್ರೋಲ್ ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.