ಕರ್ನಾಟಕ

karnataka

ETV Bharat / state

ರಾಯಚೂರು: 150 ಮಂದಿ ಕೊರೊನಾ ಶಂಕಿತರ ರಕ್ತದ ಮಾದರಿ ಪರೀಕ್ಷೆಗೆ ರವಾನೆ - ರಾಯಚೂರು: ಕೊರೊನಾ ಶಂಕಿತ 150 ಜನರ ರಕ್ತ

ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಇಂದು ಶಂಕಿತ 150 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

Raichur blood sample of 150 coroner suspects sent to the laboratory today
ರಾಯಚೂರು: ಕೊರೊನಾ ಶಂಕಿತ 150 ಜನರ ರಕ್ತದ ಮಾದರಿ ಇಂದು ಪ್ರಯೋಗಾಲಯಕ್ಕೆ ರವಾನೆ..!

By

Published : Apr 18, 2020, 11:38 PM IST

ರಾಯಚೂರು:ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಇಂದು ಶಂಕಿತ 150 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ರಾಯಚೂರು ತಾಲೂಕಿನಿಂದ 63, ಸಿಂಧನೂರಿನಿಂದ 25, ಮಾನ್ವಿಯಿಂದ 21, ಲಿಂಗಸುಗೂರಿನಿಂದ 28, ದೇವದುರ್ಗದಿಂದ 13 ಜನರ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇದರಿಂದ ಇದುವರೆಗೂ ಜಿಲ್ಲೆಯಿಂದ 265 ರಕ್ತದ ಮಾದರಿಗಳನ್ನು ತಪಾಸಣೆಗೆ ಕಳಿಸಿದಂತಾಗಿದೆ. ತಪಾಸಣೆಗೆ ಕಳುಹಿಸಲಾದ ರಕ್ತದ ಮಾದರಿಗಳಲ್ಲಿ ಇದುವರೆಗೂ 72 ನೆಗೆಟಿವ್ ಬಂದಿದ್ದು, ಇನ್ನೂ 193 ಜನರ ವರದಿ ಬರುವುದು ಬಾಕಿಯಿದೆ.

ಶಂಕಿತ ಕೊರೊನಾ ಲಕ್ಷಣ ಕಂಡು ಬಂದ 32 ಜನರಿಗೆ ಒಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದುವರೆಗೂ 26 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹೊರ ಜಿಲ್ಲೆಯಿಂದ ಆಗಮಿಸಿದ 401 ಜನರನ್ನು ಸರ್ಕಾರಿ ಕಟ್ಟಡದಲ್ಲಿ ಕ್ವಾರಂಟೈನ್​ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details