ಕರ್ನಾಟಕ

karnataka

ETV Bharat / state

ಸೋಂಕಿತ ವ್ಯಕ್ತಿ ಜೊತೆ ಸಂಪರ್ಕ: ಹೋಂ ಕ್ವಾರಂಟೈನ್​​ ಆದ ಬಿಜೆಪಿ ಶಾಸಕ - Raichur mla home quarantine

ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಕೊರೊನಾ ಸೋಂಕಿತ ವ್ಯಕ್ತಿ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

Mla shivana gowdha
Mla shivana gowdha

By

Published : Jul 17, 2020, 10:44 AM IST

ರಾಯಚೂರು: ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬರು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆ ಶಾಸಕರು ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್​​​ಗೆ ಒಳಗಾಗಿದ್ದಾರೆ.

ಜು. 14ರಂದು ನನ್ನ ಭೇಟಿಯಾದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ನಾನು ನಮ್ಮ ನಿವಾಸದ ಕೊಠಡಿಯೊಂದರಲ್ಲಿ ಸ್ವಯಂ ಹೋಂ ಕ್ವಾರಂಟೈನ್ ಆಗಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ.

ಸಾರ್ವಜನಿಕರು ನನ್ನನ್ನು 15 ದಿನಗಳ ಕಾಲ ಭೇಟಿಯಾಗುವುದು ಬೇಡ. ಅಗತ್ಯ ಕೆಲಸವಿದ್ದರೆ ನನ್ನ ಆಪ್ತ ಸಹಾಯಕರನ್ನು ದೂರವಾಣಿ ಮೂಲಕ ಸಂಪರ್ಕಸಿ. ಆದ್ರೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಬರಬಾರದೆಂದು ವಾಟ್ಸಪ್​ ಮೂಲಕ ಸಂದೇಶ ರವಾನಿಸುತ್ತಿದ್ದಾರೆ.

ಕಳೆದ ವಾರ ಕೋವಿಡ್-19 ಟೆಸ್ಟ್‌ ಮಾಡಿಸಿದಾಗ ವರದಿ ನೆಗೆಟಿವ್​​ ಬಂದಿತ್ತು. ಇದೀಗ ಸೋಂಕಿತ ವ್ಯಕ್ತಿ ಬಂದು ಹೋಗಿರುವುದರಿಂದ ನಾನು ಕ್ವಾರಂಟೈನ್​​ನಲ್ಲಿರುವುದಾಗಿ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details