ರಾಯಚೂರು:ಕೋವಿಡ್ 2ನೇ ಅಲೆ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಗೆ ಜಿಲ್ಲಾಡಳಿತ ಲಸಿಕಾ ಅಭಿಯಾನವನ್ನು ನಡೆಸುತ್ತಿದೆ. ಈ ಲಸಿಕಾಕರಣ ಸಮರ್ಪಕವಾಗಿ ನಡೆಸುವಲ್ಲಿ ಅಸಹಕಾರ ತೋರಿದ ಜಿಲ್ಲೆಯ 16 ಖಾಸಗಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
ಲಸಿಕಾ ಅಭಿಯಾನ: ಮಾಹಿತಿ ನೀಡದ 16 ಕಾಲೇಜುಗಳಿಗೆ ನೋಟಿಸ್ - ರಾಯಚೂರು ಲೇಟೆಸ್ಟ್ ಅಪ್ಡೇಟ್ ನ್ಯೂಸ್
ಲಸಿಕಾಕರಣ ಸಮರ್ಪಕವಾಗಿ ನಡೆಸುವಲ್ಲಿ ಅಸಹಕಾರ ತೋರಿದ 16 ಕಾಲೇಜುಗಳಿಗೆ ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಕಾಮಗೌಡರಿಂದ ನೋಟಿಸ್ ಜಾರಿ ಮಾಡಲಾಗಿದೆ.
ಕೋವಿಡ್ ಲಸಿಕೆ ಹಾಕಿಸುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಖಾಸಗಿ ಕಾಲೇಜುಗಳು ಪ್ರಾಂಶುಪಾಲರಿಗೆ ಮಾಹಿತಿಯನ್ನು ನೀಡುವಂತೆ ಹಲವು ಬಾರಿ ತಿಳಿಸಲಾಗಿದೆ. ಆದರೆ ಮಾಹಿತಿಯನ್ನು ಸಕಾಲದಲ್ಲಿ ನೀಡದೆ ನಿರ್ಲಕ್ಷ್ಯವನ್ನು ತೋರಿಸಲಾಗಿದೆ. ಹೀಗಾಗಿ ಕೋವಿಡ್-19 ಅಪಾಯಕಾರಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಲಸಿಕಾಕರಣದಂತಹ ಮಹತ್ತರವಾದ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಕಾರ್ಯದ ಕುರಿತಾಗಿ ಕಾಲೇಜುಗಳ ವಿರುದ್ಧ ಡಿಎಂಎ ಆ್ಯಕ್ಟ್ ಹಾಗೂ ಐಪಿಸಿ ಸೆಕ್ಷನ್ 188, 269, 270 ಮತ್ತು ಇತರ ಸಕ್ಷಮ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತರು ಮುಂದಾಗಿದ್ದಾರೆ.