ಕರ್ನಾಟಕ

karnataka

ETV Bharat / state

ಸೂಚನೆ ನೀಡದೇ ಏಕಾಏಕಿ ಎಪಿಎಂಸಿ ಬಂದ್​: ರಾಯಚೂರು ವರ್ತಕರ ಅಸಮಾಧಾನ

ಈವಾಗ ವ್ಯಾಪಾರ, ವಹಿವಾಟು ನಡೆಯುವುದು ಬೇಡ ಅಂದರೆ ರೈತರಿಗೆ ತೊಂದರೆಯಾಗುತ್ತದೆ. ಒಂದು‌ ವೇಳೆ ಮುಂಚೆಯೇ ಎಪಿಎಂಸಿ ಬಂದ್‌ಗೊಳಿಸುವಂತೆ ಸೂಚಿಸಿದ್ದರೆ ರೈತರಿಗೆ ಬೆಳೆಯನ್ನ‌ ತೆಗೆದುಕೊಂಡು ಬರದಂತೆ ಹೇಳುತ್ತಿದ್ದೆವು..

apmc
apmc

By

Published : Apr 28, 2021, 5:36 PM IST

Updated : Apr 28, 2021, 9:09 PM IST

ರಾಯಚೂರು: ಕೊರೊನಾ‌ ಸೋಂಕಿನ ಭೀತಿ ಹಿನ್ನೆಲೆ ಏಕಾಏಕಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನ ಬ‌ಂದ್‌ಗೊಳಿಸುವುದರಿಂದ ಗೊಂದಲ‌ ಉಂಟು ಮಾಡಿದೆ ಎಂದು ವರ್ತಕರು ದೂರಿದ್ದಾರೆ.

ನಗರದ ಕೊರೊನಾ‌ ಸೋಂಕಿನ ಭೀತಿಯಿಂದಾಗಿ ಮಾರುಕಟ್ಟೆಗೆ ನಿತ್ಯ ರೈತರು ಕಟಾವ್ ಮಾಡಿದ ಸಾವಿರಾರು ಚೀಲ ಭತ್ತದ ಬೆಳೆ ಬರುತ್ತಿದೆ. ಇಂದು ಯಾವುದೇ ಮುನ್ಸೂಚನೆ ನೀಡದೇ ಎಪಿಎಂಸಿ ಬಂದ್ ಮಾಡುವಂತೆ ಹೇಳುತ್ತಿದ್ದಾರೆ. ಆದ್ರೆ, ಈಗಾಗಲೇ 50 ಸಾವಿರ ಚೀಲ ಭತ್ತ ಬಂದಿದೆ.

ಈವಾಗ ವ್ಯಾಪಾರ, ವಹಿವಾಟು ನಡೆಯುವುದು ಬೇಡ ಅಂದರೆ ರೈತರಿಗೆ ತೊಂದರೆಯಾಗುತ್ತದೆ. ಒಂದು‌ ವೇಳೆ ಮುಂಚೆಯೇ ಎಪಿಎಂಸಿ ಬಂದ್‌ಗೊಳಿಸುವಂತೆ ಸೂಚಿಸಿದ್ದರೆ ರೈತರಿಗೆ ಬೆಳೆಯನ್ನ‌ ತೆಗೆದುಕೊಂಡು ಬರದಂತೆ ಹೇಳುತ್ತಿದ್ದೆವು.

ಎಪಿಎಂಸಿ ಬಂದ್​: ರಾಯಚೂರು ವರ್ತಕರ ಅಸಮಾಧಾನ

ಇವತ್ತು ತಂದಿರುವ ಬೆಳೆಯನ್ನ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ನಾಳೆಯಿಂದ ಬಂದ್ ಮಾಡಿ ಇದನ್ನು ನಾವು ರೈತರಿಗೆ ಹೇಳುವ ಮೂಲಕ ಬಂದ್‌ಗೆ ಸಹಕಾರ ನೀಡುತ್ತೇವೆ ಅಂತಾ ವರ್ತಕರು ಹೇಳಿದ್ದಾರೆ.

Last Updated : Apr 28, 2021, 9:09 PM IST

ABOUT THE AUTHOR

...view details