ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಅಂಗನವಾಡಿ ನೌಕರರ ಸಂಘಟನೆ (ಸಿಐಟಿಯು) ಪ್ರತಿಭಟನೆ ನಡೆಸಿ ನಂತರ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ - ಅಂಗನವಾಡಿ ನೌಕರರ ಸಂಘಟನೆ (ಸಿ.ಐ.ಟಿ.ಯು) ಪ್ರತಿಭಟನೆ
ಉದ್ಯೊಗ ಭದ್ರತೆ ಇಲ್ಲದಿದ್ರೂ ಸಹ ಕೊರೊನಾ ವೈರಸ್ ಹರಡದಂತೆ ಸರ್ಕಾರದ ಪ್ರತಿ ಸೂಚನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿರುವ ನಮಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಜೊತೆಗೆ ನಿಗದಿತ ಅವಧಿಯಲ್ಲಿ ವೇತನ ನೀಡಬೇಕು..
![ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ Protest](https://etvbharatimages.akamaized.net/etvbharat/prod-images/768-512-01:24:23:1593762863-kn-lhs-02-anganavadi-request-kac10020-03072020131743-0307f-1593762463-592.jpg)
Protest
ಉದ್ಯೊಗ ಭದ್ರತೆ ಇಲ್ಲದಿದ್ರೂ ಸಹ ಕೊರೊನಾ ವೈರಸ್ ಹರಡದಂತೆ ಸರ್ಕಾರದ ಪ್ರತಿ ಸೂಚನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿರುವ ನಮಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಜೊತೆಗೆ ನಿಗದಿತ ಅವಧಿಯಲ್ಲಿ ವೇತನ ನೀಡಬೇಕು. ಖಾಲಿ ಇರುವ ಅಂಗನವಾಡಿ ಹುದ್ದೆಗಳನ್ನು ಭರ್ತಿ ಮಾಡಬೇಕು.
ಮೃತಪಟ್ಟ ನೌಕರರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ನಿಗದಿತ ದಿನಾಂಕದೊಳಗೆ ನೌಕರರಿಗೆ ಗುಣಮಟ್ಟದ ಪಡಿತರ ಪೂರೈಸಬೇಕು. ಮೇಲ್ವಿಚಾರಕಿಯರ ವರ್ಗಾವಣೆ ಮಾಡಿ, ನೌಕರರಿಗೆ ಬಡ್ತಿ ನೀಡಲು ಮುಂದಾಗಬೇಕು. ಕಳಪೆ ಸಮವಸ್ತ್ರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
TAGGED:
Raichur protest news