ರಾಯಚೂರು :ಕೊರೊನಾ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಖಾಸಗಿ ಆಸ್ಪತ್ರೆ ಸಹಯೋಗಕ್ಕೆ ಮುಂದಾಗಿದೆ. ನಗರದ ಅಮರೇಶ್ವರ ಆಸ್ಪತ್ರೆಯು ಕೊರೊನಾ ಆಸ್ಪತ್ರೆಯಾಗಿ ಸೇವೆ ನೀಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾದ್ಯಕ್ಷ ಡಾ. ಮಾಹಲಿಂಗಪ್ಪ ಹೇಳಿದರು.
ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿದಿನ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಜಿಲ್ಲಾಡಳಿತ ಸಹಯೋಗದಲ್ಲಿ ಕಳೆದ ತಿಂಗಳು ನಗರದ ಎರಡು ಖಾಸಗಿ ಆಸ್ಪತ್ರೆಗೆ ಕೊರೊನಾ ತಪಾಸಣೆಗೆ ಅನುಮತಿ ನೀಡಿತ್ತು. ಇಂದು 30 ಹಾಸಿಗೆಯ ಅಮರೇಶ್ವರ ಆಸ್ಪತ್ರೆಗೆ ಕೊರೊನಾ ತಪಾಸಣೆಗೆ ಅನುಮತಿ ನೀಡಲಾಗಿದೆ.