ರಾಯಚೂರು:ಜಿಲ್ಲೆಯ ನಾನಾ ಭಾಗದ ರೈತರು ತಾವು ಬೆಳದ ಬೆಳೆಯನ್ನ ನಗರದ ರಾಜೇಂದ್ರ ಗಂಜ್‌ಗೆ ತರುತ್ತಿದ್ದಾರೆ. ಇಂದು ಬೆಳಗ್ಗೆ ಭತ್ತ, ಶೇಂಗಾ, ಈರುಳ್ಳಿ, ತೊಗರಿ ಸೇರಿದಂತೆ ಇನ್ನಿತರ ಬೆಳೆಯ ಫಸಲು ಮಾರುಕಟ್ಟೆಗೆ ಬಂದಿದ್ದು ಟೆಂಡರ್‌ದಾರರು, ಖರೀದಿದಾರರು ಕೂಡ ಬಂದಿದ್ದರು.
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಆರಂಭ - ರಾಜೇಂದ್ರ ಗಂಜ್
ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟು ಮತ್ತೆ ರೈತರಿಗಾಗಿ ಪುನರಾರಂಭವಾಗಿದೆ. ರೈತರು ಮಾರುಕಟ್ಟೆಗೆ ತಾವು ಬೆಳೆದ ಉತ್ಪನ್ನ ತಂದು ಮಾರಬಹುದು. ಬೆಳೆಯನ್ನ ಮಾರುಕಟ್ಟೆಗೆ ತರುವಾಗ ವಾಹನಗಳನ್ನ ತಡೆಯದಂತೆ ಸೂಚನೆ ನೀಡಲಾಗಿದೆ.
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಇಂದಿನಿಂದ ಆರಂಭ
ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಸದ್ಯ ರೈತರು ಮಾರುಕಟ್ಟೆಗೆ ತಾವು ಬೆಳೆದ ಉತ್ಪನ್ನ ತರುವ ಸಮಯದಲ್ಲಿ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಲಾಗಿದೆ. ಬೆಳೆಯನ್ನು ಮಾರುಕಟ್ಟೆಗೆ ತರುವಾಗ ವಾಹನಗಳನ್ನ ತಡೆಯದಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಯಾರಾದರೂ ವಾಹನ ತಡೆದರೆ ರೈತರು ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 9480803800ಕ್ಕೆ ಕರೆ ಮಾಡಬಹುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
Last Updated : Apr 3, 2020, 8:25 PM IST