ರಾಯಚೂರು: ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಕೇಂದ್ರಗಳಿಗೆ ವಿದ್ಯುತ್ ಬೇಡಿಕೆ ಕುಸಿತದಿಂದ ತಾಲೂಕಿನ ಶಕ್ತಿ ನಗರದಲ್ಲಿನರುವ ಆರ್ಟಿಪಿಎಸ್ನ 6 ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.
ಸದ್ಯ 2, 3, 4, 6, 7 ಹಾಗೂ 8ನೇ ವಿದ್ಯುತ್ ಉತ್ಪಾದನಾ ಘಟಕಗಳನ್ನ ಸ್ಥಗಿತಗೊಳಿಸಲಾಗಿದೆ. ಕಳೆದೆರಡು ದಿನಗಳಿಂದ ವಿದ್ಯುತ್ ಉತ್ಪಾದನಾ ಘಟಕಗಳನ್ನ ಸ್ಥಗಿತಗೊಳಿಸಿದ್ದು, 1 ಮತ್ತು 5ನೇ ಘಟಕಗಳಿಂದ 291 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಸದ್ಯ ಸ್ಥಗಿತಗೊಂಡ 6 ಘಟಕಗಳ ಪೈಕಿ 8ನೇ ಘಟಕ ಜನರೇಟರ್ ದೋಷದಿಂದ ಸ್ಥಗಿತವಾಗಿದೆ.