ರಾಯಚೂರು:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.
ಇದೇ ಮೊದಲ ಬಾರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಶ್ರೀಮಠದ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು. ಮೊದಲಿಗೆ ಗ್ರಾಮ ದೇವತೆ ಶ್ರೀಮಂಚಾಲಮ್ಮ ದೇವಿಯ ದರ್ಶನ ಪಡೆದ ಅವರು ನಂತರ ವಿಶೇಷ ಪೂಜೆ ನೆರವೇರಿಸಿದರು. ಇದಾದ ಬಳಿಕ ಶ್ರೀರಾಘವೇಂದ್ರ ಸ್ವಾಮಿ ಮೂಲಬೃಂದಾವನದ ದರ್ಶನ ಪಡೆದುಕೊಂಡು ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿಗೆ ರಾಯರ ಶ್ಲೋಕ ಹೇಳಿಸಿ, ಆಶೀರ್ವದಿಸಿದರು. ಮಠದಿಂದ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.