ರಾಯಚೂರು :ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಉತ್ತಾರಾರಾಧಾನೆ ನಿಮಿತ್ತವಾಗಿ ಮಹಾ ರಥೋತ್ಸವ ನಡೆಯಿತು. ಶ್ರೀಮಠದ ರಥ ಬೀದಿಗಳಲ್ಲಿ ಪ್ರಹ್ಲಾದ ರಾಜರ ಮೂರ್ತಿಯನ್ನು ಇರಿಸಿ ಮಹಾ ರಥೋತ್ಸವ ನೆರವೇರಿಸಲಾಯಿತು. ವಿವಿಧ ಕಲಾ ತಂಡಗಳು, ವಾದ್ಯ-ಮೇಳಗಳೊಂದಿಗೆ ವೈಭವದ ರಥೋತ್ಸವ ಜರುಗಿತು.
ಶ್ರೀಗುರು ರಾಯರು ಬೃಂದಾವನಸ್ಥರಾಗಿ 350 ವರ್ಷಗಳು ಸಂದಿವೆ. ಉತ್ತಾರಾರಾಧನೆ ವಿಶೇಷವಾಗಿ ಮೂಲ ಬೃಂದಾವನಕ್ಕೆ ಪುಷ್ಪಾಂಲಕಾರ ಮಾಡಲಾಗಿತ್ತು. ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲಾಯಿತು.