ಕರ್ನಾಟಕ

karnataka

ETV Bharat / state

ಮಂತ್ರಾಲಯದಲ್ಲಿ ಗುರು ರಾಯರ 426 ನೇ ವರ್ಧಂತಿ ಮಹೋತ್ಸವ - Raghavendra Swamiji Vardhanti in Mantralaya news

ಇಂದು ಶ್ರೀರಾಘವೇಂದ್ರ ಸ್ವಾಮೀಜಿಗಳ 426ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆ ರಾಯರ ಮೂಲ‌ ಬೃಂದಾವನ ಪಂಚಾಮೃತ ಅಭಿಷೇಕ ನಡೆಯಿತು.

ಮಂತ್ರಾಲಯದಲ್ಲಿ ಗುರು ರಾಯರ 426 ನೇ ವರ್ಧಂತಿ ಮಹೋತ್ಸವ
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮೀಜಿ ವರ್ಧಂತಿ

By

Published : Mar 20, 2021, 3:34 PM IST

ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 426 ನೇ ವರ್ಧಂತಿ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ.

ರಾಯರ 400ನೇ ಪಟ್ಟಾಭಿಷೇಕ ಮಹೋತ್ಸವ ಮತ್ತು ಗುರು ವೈಭವ ಉತ್ಸವ ನಡೆಯುತ್ತಿದ್ದು, ಇಂದು ಶ್ರೀರಾಘವೇಂದ್ರ ಸ್ವಾಮಿಗಳ 426ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆ ರಾಯರ ಮೂಲ‌ ಬೃಂದಾವನ ಪಂಚಾಮೃತ ಅಭಿಷೇಕ ನಡೆಯಿತು.

ಮಂತ್ರಾಲಯದಲ್ಲಿ ಗುರು ರಾಯರ 426 ನೇ ವರ್ಧಂತಿ ಮಹೋತ್ಸವ

ಬಳಿಕ ತಿರುಪತಿ ತಿರುಮಲ ದೇವಾಲಯದಿಂದ ಶೇಷವನ್ನ‌ ಪೀಠಾಧಿಪತಿ ಶ್ರೀಸುಬುದೇಂದ್ರ ತೀರ್ಥರು ಮಠದ ಸಂಪ್ರದಾಯದಂತೆ ಬರಮಾಡಿಕೊಂಡರು. ಬಳಿಕ ಚಿನ್ನದ ರಥೋತ್ಸವ ನಡೆಯಿತು.

ತಮಿಳುನಾಡು ಭಕ್ತರಿಂದ ನಾದಹಾರ ಕಾರ್ಯಕ್ರಮ ನಡೆಯುತ್ತಿದೆ. ಸಂಜೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು‌ ನಡೆಯಲಿದ್ದು, ಚಿತ್ರನಟ ಡಾ.ಶಿವರಾಜ ಕುಮಾರ್ ಭಾಗವಹಿಸಲಿದ್ದಾರೆ.

For All Latest Updates

TAGGED:

ABOUT THE AUTHOR

...view details