ಕರ್ನಾಟಕ

karnataka

ETV Bharat / state

ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ವಂಚನೆ ಪ್ರಕರಣ ದಾಖಲು

ಗ್ರಾಮ ಲೆಕ್ಕಾಧಿಕಾರಿ ಮತ್ತು ಆತನ ಸಹೋದರನ ಹೆಸರಿನ ಖಾತೆಗೆ ಹಣ ಪಾವತಿಸಿಕೊಂಡು ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ತಹಶೀಲ್ದಾರ್ ಚಾಮರಾಜ ಪಾಟೀಲ್ ನೀಡಿದ ದೂರಿನ ಮೇಲೆ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ವಂಚನೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

racyachur village account golmal froud case
ರಾಯಚೂರು: ಖಾತೆಗೆ ಹಾಕುವ ಹಣದಲ್ಲಿ ಗೋಲ್ ಮಾಲ್, ಗ್ರಾಮಲೆಕ್ಕಾಧಿಕಾರಿ ವಿರುದ್ಧ ವಂಚನೆ ಪ್ರಕರಣ ದಾಖಲು..!

By

Published : Apr 25, 2020, 8:04 PM IST

ರಾಯಚೂರು:ಲಿಂಗಸುಗೂರು ತಾಲೂಕಿನ ಗೋನವಾಟ್ಲ ಗ್ರಾಮ ಲೆಕ್ಕಾಧಿಕಾರಿ ಧರಿಯಪ್ಪ ಮಾಳಿ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.

ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ವಂಚನೆ ಪ್ರಕರಣ ದಾಖಲು

ಬೆಳೆ ಪರಿಹಾರ ಡಾಟಾ ಎಂಟ್ರಿ ಮಾಡುವಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಜಮೀನು ಮಾಲೀಕರ ಖಾತೆಗೆ ಹಣ ಪಾವತಿಸದೆ ಗ್ರಾಮ ಲೆಕ್ಕಾಧಿಕಾರಿ ಧರಿಯಪ್ಪಮಾಳಿ ತಮ್ಮ ಸ್ವಂತ ಖಾತೆಗೆ 73,999 ರೂ. ಪಾವತಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅದೇ ರೀತಿ ಗ್ರಾಮ ಲೆಕ್ಕಾಧಿಕಾರಿ ಇತರೆ ಜಮೀನು ಮಾಲೀಕರ ಖಾತೆಗೆ ಹಾಕುವ ಹಣವನ್ನು ತಮ್ಮ ಸಹೋದರ ರವಿಮಾಳಿ ಅವರ ಖಾತೆಗೆ 46,999 ರೂ. ಪಾವತಿಸುವ ಮೂಲಕ ವಂಚಿಸಿದ್ದಾರೆ ಎನ್ನಲಾಗಿದೆ.

ಗ್ರಾಮ ಲೆಕ್ಕಾಧಿಕಾರಿ ಮತ್ತು ಆತನ ಸಹೋದರನ ಹೆಸರಿನ ಖಾತೆಗೆ ಹಣ ಪಾವತಿಸಿಕೊಂಡು ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ತಹಶೀಲ್ದಾರ್ ಚಾಮರಾಜ ಪಾಟೀಲ್ ನೀಡಿದ ದೂರಿನ ಮೇಲೆ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ವಂಚನೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ABOUT THE AUTHOR

...view details