ರಾಯಚೂರು:ಕೊರೊನಾ ಸೋಂಕಿತರು ಮತ್ತು ವೈದ್ಯಕೀಯ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ನಡೆದಿದೆ.
ರಾಯಚೂರಿನ ಓಪೆಕ್ ಆಸ್ಪತ್ರೆ ವೈದ್ಯರು-ಕೊರೊನಾ ಸೋಂಕಿತರ ಮಧ್ಯೆ ವಾಗ್ವಾದ - OPEC Hospital Kovid-19 Ward
ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಮತ್ತು ವೈದ್ಯಕೀಯ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆ ನಡೆದಿದೆ.
ನಗರದ ಹೊರವಲಯದಲ್ಲಿರುವ ಓಪೆಕ್ ಆಸ್ಪತ್ರೆಯಲ್ಲಿ ಕೋವಿಡ್-19 ವಾರ್ಡ್ ತೆಗೆಯಲಾಗಿದ್ದು, ಸೋಂಕಿತರನ್ನg ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ತಮಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ, ನಮ್ಮ ವರದಿಯ ಬಗ್ಗೆ ಕೂಡ ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ನಮಗೆ ಸೂಕ್ತ ವ್ಯವಸ್ಥೆಯನ್ನ ಕಲ್ಪಿಸಿ, ಇಲ್ಲವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ವೈದ್ಯ ಸಿಬ್ಬಂದಿಯೊಂದಿಗೆ ಗಲಾಟೆಗಿಳಿದ ಸೋಂಕಿತರು ಆಸ್ಪತ್ರೆಯಿಂದ ಹೊರನಡೆಯಲು ಮುಂದಾಗಿದ್ದು, ಪೊಲೀಸರು ಗೇಟ್ ಬಂದ್ ಮಾಡಿ ಸೋಂಕಿತರನ್ನ ಗೇಟ್ ಬಳಿಯೇ ತಡೆದರು.