ರಾಯಚೂರು :ಕ್ಷುಲ್ಲಕ ಕಾರಣಕ್ಕೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ರಾಮತ್ನಾಳದಲ್ಲಿ ಎರಡು ಗುಂಪುಗಳ ಮಧ್ಯೆ ಮಂಗಳವಾರ ಘರ್ಷಣೆ ಜರುಗಿದೆ.
ಟ್ರ್ಯಾಕ್ಟರ್ ಜೋರಾಗಿ ಓಡಿಸುವ ಮತ್ತು ಅತಿಯಾದ ಶಬ್ದಕ್ಕೆ ಸಂಬಂಧಿಸಿ ಸೋಮವಾರ ಎರಡು ಗುಂಪು ಮಧ್ಯೆ ವಾಗ್ವಾದ ನಡೆದು ಶಮನಗೊಂಡಿತ್ತು. ಇದೇ ವಿಚಾರವಾಗಿ ಮಂಗಳವಾರ ಒಂದು ಸಮುದಾಯದವರು ಗುಂಪು ಕಟ್ಟಿಕೊಂಡು ಮತ್ತೊಂದು ಸಮುದಾಯದವರ ಬಡಾವಣೆಗೆ ಕೇಳಲು ಬಂದಾಗ ಸಂಘರ್ಷ ನಡೆದಿದೆ. ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆ.
ರಾಯಚೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಗಾಯಗೊಂಡು ಲಿಂಗಸುಗುರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮುದಾಯವೊಂದರ ಸಂಗಪ್ಪ, ಹನುಮಂತ, ಪಾರ್ವತಮ್ಮ, ವಿಜಯಲಕ್ಷ್ಮಿ ಅವರನ್ನು ಡಿವೈಎಸ್ಪಿ ಎಸ್. ಎಸ್ ಹುಲ್ಲೂರು ಭೇಟಿ ಮಾಡಿ ವಿಚಾರಣೆ ನಡೆಸಿದರು. ಈ ಕುರಿತು ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಓದಿ:ರಣೋತ್ಸಾಹದಿಂದ ಮುನ್ನುಗ್ತಿದೆ ರಷ್ಯಾ ಸೇನೆ: ಕೀವ್ನಿಂದ ತಕ್ಷಣ ಹೊರಡುವಂತೆ ತನ್ನ ಪ್ರಜೆಗಳಿಗೆ ಭಾರತದ ತುರ್ತು ಸೂಚನೆ