ರಾಯಚೂರು:ತುಂಗಭದ್ರಾ ನದಿಯಲ್ಲಿ ಇಂದಿನಿಂದ ಪುಷ್ಕರ ಆರಂಭವಾಗಿದ್ದು, ಶ್ರೀ ರಾಘವೇಂದ್ರ ಮಠದಿಂದ ನದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆ ಶ್ರೀ ಮಠದಿಂದ ರಾಯರ ಮೂರ್ತಿ, ಪ್ರಹ್ಲಾದ್ ರಾಜರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ನದಿಯವರೆಗೆ ಕೊಡೊಯ್ಯಲಾಯಿತು. ಬಳಿಕ ನದಿಯಲ್ಲಿ ಪುಣ್ಯ ಸ್ನಾನ ಮಾಡಿಸಿ, ಗಂಗಾ ಮಾತೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪುಷ್ಕರಕ್ಕೆ ಬಂದ ಭಕ್ತರಿಗೆ ಶ್ರೀಗಳು ಅನುಗ್ರಹ ನೀಡಿದರು.
ಶ್ರೀ ರಾಘವೇಂದ್ರ ಮಠದಿಂದ ತುಂಗಭದ್ರಾ ನದಿಗೆ ವಿಶೇಷ ಪೂಜೆ ನದಿಯಲ್ಲಿನ ಪೂಜೆ ಕಾರ್ಯದ ಬಳಿಕ ರಾಯರ ಮೂಲ ಬೃಂದಾವನಕ್ಕೆ ನದಿಯ ನೀರಿನಿಂದ ಅಭಿಷೇಕ ನೇರವೇರಿಸಲಾಯಿತು. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಪುಣ್ಯ ಸ್ನಾನ ಮಾಡಿದರು. ಇದಾದ ಬಳಿಕ ಭಕ್ತರು ನದಿಯಲ್ಲಿ ಮಿಂದೆದ್ದರು. ಕೊರೊನಾ ಭೀತಿ ಹಿನ್ನೆಲೆ ಅಲ್ಲಿನ ಸ್ಥಳೀಯ ಆಡಳಿತ ನದಿಯಲ್ಲಿ ಸ್ನಾನಕ್ಕೆ ನಿರ್ಬಂಧ ಹೇರಿದೆ. ಇದರ ನಡುವೆಯೂ ಸ್ನಾನ ಮಾಡುವ ದೃಶ್ಯಗಳು ಕಂಡು ಬಂದವು.
12ವರ್ಷಕ್ಕೊಮ್ಮೆ ಒಂದು ನದಿಯಲ್ಲಿ ಪುಷ್ಕರ ಬರಲಿದೆ. ಈ ಬಾರಿ ತುಂಗಭದ್ರಾ ನದಿಗೆ ಬಂದಿದ್ದು, ಇಂದಿನಿಂದ ಡಿ.1ರವರೆಗೆ ನದಿಯಲ್ಲಿ ಪುಷ್ಕರ ಇರಲಿದೆ.