ಕರ್ನಾಟಕ

karnataka

ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ.. ಕುಪ್ಪಿಗುಡ್ಡದಿಂದ ಲಿಂಗಸುಗೂರಿಗೆ ಬರುತ್ತಿರುವ ಜನ!

ಕುಪ್ಪಿಗುಡ್ಡದಲ್ಲಿ ಅಳವಡಿಸಿದ್ದ ಶುದ್ಧ ನೀರಿನ ಘಟಕದ ಸಂಗ್ರಹಣಾ ತೊಟ್ಟಿ ಎರಡು ತಿಂಗಳಿಂದ ಸಂಪೂರ್ಣ ಶಿಥಿಲಗೊಂಡಿದೆ. ಇದರಿಂದ ಜನರು ಲಿಂಗಸುಗೂರು ಪಟ್ಟಣಕ್ಕೆ ತೆರಳಿ ಶುದ್ಧ ನೀರು ತರುವಂತಾಗಿದೆ.

By

Published : May 5, 2020, 4:11 PM IST

Published : May 5, 2020, 4:11 PM IST

Updated : May 5, 2020, 5:01 PM IST

pure drinking water problem
ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿ ಘಟಕ

ರಾಯಚೂರು :ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಪ್ಪಿಗುಡ್ಡ ಗ್ರಾಮದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಇದರಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ.

ಎರಡು ತಿಂಗಳಿಂದ ಕುಪ್ಪಿಗುಡ್ಡದಲ್ಲಿ ಅಳವಡಿಸಿದ್ದ ಶುದ್ಧ ನೀರಿನ ಘಟಕದ ಸಂಗ್ರಹಣಾ ತೊಟ್ಟಿ ಸಂಪೂರ್ಣ ಶಿಥಿಲಗೊಂಡಿದೆ. ಇದರಿಂದ ಜನರು ಲಿಂಗಸುಗೂರು ಪಟ್ಟಣಕ್ಕೆ ತೆರಳಿ ಶುದ್ಧ ನೀರು ತರುವಂತಾಗಿದೆ. ಆದಷ್ಟು ಬೇಗ ಶುದ್ಧ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಜನರು ಮನವಿ ಮಾಡಿದ್ದಾರೆ.

ನವ ಕರ್ನಾಟಕ ರಕ್ಷಣಾ ವೇದಿಕೆ ಹಿರಿಯ ಮುಖಂಡ ಹನುಮಂತರಾಯ ನೆಲೋಗಿ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕದ ಸಿಂಟೆಕ್ಸ್​ಗೆ​ ಪರ್ಯಾಯ ವ್ಯವಸ್ಥೆ ಮಾಡಲು ಮನವಿ ಮಾಡಲಾಗಿದೆ. ಆದರೆ, ಈವರೆಗೂ ಯಾವುದೇ ಅಧಿಕಾರಿ, ಸ್ಥಳೀಯ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Last Updated : May 5, 2020, 5:01 PM IST

ABOUT THE AUTHOR

...view details