ಕರ್ನಾಟಕ

karnataka

ETV Bharat / state

ಹೈ.ಕ ಭಾಗಕ್ಕೆ ಕೇವಲ ಒಂದು ಸಚಿವ ಸ್ಥಾನ: ಸಂಸದ ಅಮರೇಶ್ವರ ನಾಯಕ ಅಸಮಾಧಾನ - kannada news

ಹೈ-ಕ ಪ್ರದೇಶಕ್ಕೆ ಮೂರು ಡಿಸಿಎಂ ಸ್ಥಾನ ನೀಡದಿರುವುದಕ್ಕೆ ಅಸಮಾಧಾನವಿದೆ. ಆದರೆ ಪಕ್ಷದ ಹೈಕಮಾಂಡ್​ ತೀರ್ಮಾನ ಪಾಲಿಸಬೇಕೆಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಜನಪ್ರತಿನಿಧಿಯಾದವರು ಒಂದು ಸಮುದಾಯಕ್ಕೆ ಸೀಮಿತವಾಗಿ ಮಾತನಾಡಬಾರದು

By

Published : Aug 28, 2019, 5:10 PM IST

ರಾಯಚೂರು:ನಾಯಕ ಸಮುದಾಯಕ್ಕೆ ಡಿಸಿಎಂ ಸ್ಥಾನಮಾನ ನೀಡುವುದು ಬಿಡುವುದು ಪಕ್ಷದ ಹೈಕಮಾಂಡ್, ಸಿಎಂ ತಿರ್ಮಾನವಾಗಿರುತ್ತದೆ. ಒಮ್ಮೆ ಪಕ್ಷ ಏನು ತಿರ್ಮಾನ ಕೈಗೊಳ್ಳುತ್ತದೆ ಅದಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದ್ದಾರೆ.

ನಗರದ ಸಂಸದ ಕಚೇರಿಯಲ್ಲಿ ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ಅವರು, ಹೈ-ಕ ಭಾಗಕ್ಕೆ ಮೂರು ಸಚಿವ ಸ್ಥಾನ ನೀಡಿಲ್ಲ. ಹಾಗಾಗಿ ಅಸಮಾಧಾನವಿದೆ. ಆದ್ರೆ ಪಕ್ಷ ಏನು ತಿರ್ಮಾನ ಕೈಗೊಳ್ಳಬೇಕು ಅದಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂದ್ರು. ನಾಯಕ ಸಮುದಾಯಕ್ಕೆ, ಸಚಿವ ಶ್ರೀರಾಮುಲುರಿಗೆ ಡಿಸಿಎಂ ಹುದ್ದೆ ನೀಡದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಯಾದವರು ಒಂದು ಸಮುದಾಯಕ್ಕೆ ಸೀಮಿತವಾಗಿ ಮಾತನಾಡಬಾರದು. ಆದ್ರೂ ಆಯಾ ಸಮಯದಾಯಕ್ಕೆ ಸ್ಥಾನಮಾನಕ್ಕೆ ಅಭಿಲಾಷೆ ಇರುತ್ತೆ. ಹಾಗಂತ ಎಲ್ಲಾ ಸಮುದಾಯಕ್ಕೆ ಒಂದೊಂದು ಸ್ಥಾನ ಕೊಡುವುದಕ್ಕೆ ಆಗಲ್ಲ ಎಂದ್ರು.

ಜನಪ್ರತಿನಿಧಿಯಾದವರು ಒಂದು ಸಮುದಾಯಕ್ಕೆ ಸೀಮಿತವಾಗಿ ಮಾತನಾಡಬಾರದು
ಹೈ-ಕ ಪ್ರದೇಶಕ್ಕೆ ಹಿಂದುಳಿದ ಪ್ರದೇಶವೆಂದು ಪ್ರತಿಯೊಂದರಲ್ಲಿ ಕರೆಯುತ್ತೇವೆ. ಆದ್ರೆ ಸಚಿವ ಸ್ಥಾನ ನೀಡುವ ವೇಳೆ ಕೇವಲ ಒಂದು ಸ್ಥಾನ ಮಾತ್ರ ನೀಡಲಾಗಿದೆ. ಇದರಿಂದ ನಮಗೆ ಅಸಮಾಧಾನವಿದೆ. ಹೈ-ಕ ಭಾಗಕ್ಕೆ ಮೂರು ಸಚಿವ ಸ್ಥಾನ ನೀಡಬೇಕು. ಇಂತಹವರಿಗೇ ನೀಡಬೇಕೆಂದು ಹೆಸರು ಹೇಳುವುದಿಲ್ಲ. ಆದ್ರೆ ನೀಡಬೇಕಾಗಿತ್ತು, ನೀಡಿಲ್ಲ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುವ ಜತೆಗೆ ಹೈ-ಕ ಭಾಗಕ್ಕೆ ಒಂದು ಸಚಿವ ಸ್ಥಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details