ರಾಯಚೂರು:ಜೈನ್ ಸಂಘಟನೆ ವತಿಯಿಂದ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ನಿತ್ಯ ಉಚಿತ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ.
ಜೈನ್ ಸಂಘಟನೆಯ ಸದಸ್ಯರು ಮೇ 12ರಿಂದ ಕೊರೊನಾ ಸೋಂಕಿತರು ಹಾಗೂ ಅವರನ್ನು ನೋಡಿಕೊಳ್ಳುವವರು ಸೇರಿದಂತೆ ಪ್ರತಿನಿತ್ಯ 100 ರಿಂದ 150 ಜನರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಒದಗಿಸುತ್ತಿದ್ದಾರೆ.