ರಾಯಚೂರು:ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶನಿವಾರ ದಿಢೀರ್ ಈರುಳ್ಳಿ ಖರೀದಿಯನ್ನ ಸ್ಥಗಿತಗೊಳಿಸಿರುವುದನ್ನ ಖಂಡಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಎಪಿಎಂಸಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಎಂದಿನಂತೆ ರೈತರು ಎಪಿಎಂಸಿಗೆ ಮಾರಾಟಕ್ಕಾಗಿ ಈರುಳ್ಳಿಯನ್ನ ತಂದಿದ್ದಾರೆ. ರೈತರು ಈರುಳ್ಳಿ ಮಾರಾಟ ಮಾಡಲು ಆಯಾ ವರ್ತಕರ ಅಂಗಡಿಯ ಮುಂದೆ ಈರುಳ್ಳಿ ಹಾಕುವ ಮೂಲಕ ಮಾರಾಟ ಮಾಡುವುದಕ್ಕೆ ಕಾದು ಕುಳಿತ್ತಿದ್ದಾರೆ. ಆದ್ರೆ, ಈರುಳ್ಳಿ ಖರೀದಿಸಲು ಮುಂದಾಗಬೇಕಾದ ವರ್ತಕರು ಏಕಾಏಕಿ ಈರುಳ್ಳಿ ಖರೀದಿಸುವುದಿಲ್ಲ ಅಂತಾ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಎಪಿಎಂಸಿ ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.