ಕರ್ನಾಟಕ

karnataka

ETV Bharat / state

ಲಿಂಗಸುಗೂರು: ತಂಜೀಮುಲ್ ಮುಸ್ಲಿಮಿನ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ - Lingasuguru raichur latest news

ಒಂದು ಧರ್ಮದ ಕುರಿತು ಅವಹೇಳನಕಾರಿ ಪೋಸ್ಟ್ ಖಂಡಿಸಿ ಇಂದು ಲಿಂಗಸುಗೂರಲ್ಲಿ ಪ್ರತಿಭಟನೆ ನಡೆಸಲಾಯಿತು.

Protest by Tanjimul muslimin committee
Protest by Tanjimul muslimin committee

By

Published : Aug 12, 2020, 4:35 PM IST

ಲಿಂಗಸುಗೂರು (ರಾಯಚೂರು): ವಿಶ್ವಕ್ಕೆ ಶಾಂತಿ, ಸಹನೆ, ಸಹಬಾಳ್ವೆ ಕುರಿತು ಬೋಧಿಸಿದ ಪ್ರವಾದಿಯ ಕುರಿತು ಅವಹೇಳನ ಪೋಸ್ಟ್ ಖಂಡಿಸಿ ಇಂದು ಲಿಂಗಸುಗೂರಲ್ಲಿ ಪ್ರತಿಭಟನೆ ನಡೆಸಲಾಯಿತು.

ತಂಜೀಮುಲ್ ಮುಸ್ಲಿಮಿನ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರವಾದಿಗೆ ಅವಮಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ವಿಚಾರ ಸ್ವಾಗತಾರ್ಹ. ಅದರೆ, ರಾಜಕೀಯವಾಗಿ ರಕ್ಷಣೆ ನೀಡುವಂತಹ ಕೆಲಸ ಆಗಬಾರದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಯಾವುದೇ ಒಂದು ಧರ್ಮದ ಬಗ್ಗೆ ಅವಹೇಳನ ಮಾಡುವ, ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡುವ ದುಷ್ಟಶಕ್ತಿಗಳಿಗೆ ಅವಕಾಶ ನೀಡಬಾರದು. ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.

ABOUT THE AUTHOR

...view details