ಕರ್ನಾಟಕ

karnataka

ETV Bharat / state

ರಾಯಣ್ಣ ಮೂರ್ತಿ ಸ್ಥಳಾಂತರಕ್ಕೆ ಖಂಡನೆ: ಲಿಂಗಸುಗೂರಿನಲ್ಲಿ ಪ್ರತಿಭಟನೆ - ಸಂಗೊಳ್ಳಿ ರಾಯಣ್ಣ ಮೂರ್ತಿ

ಬೆಳಗಾವಿ ಜಿಲ್ಲೆ ಪರನವಾಡಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ರಾಷ್ಟ್ರಧ್ವಜ ಸಮೇತ ಸ್ಥಳಾಂತರಗೊಳಿಸಿದ ಹಿನ್ನೆಲೆಯಲ್ಲಿ ಘಟನೆ ಖಂಡಿಸಿ ಲಿಂಗಸುಗೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಲಿಂಗಸುಗೂರಿನಲ್ಲಿ ಪ್ರತಿಭಟನೆ
ಲಿಂಗಸುಗೂರಿನಲ್ಲಿ ಪ್ರತಿಭಟನೆ

By

Published : Aug 19, 2020, 2:07 PM IST

ಲಿಂಗಸುಗೂರು: ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಳಾಂತರ ಖಂಡಿಸಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬೆಳಗಾವಿ ಜಿಲ್ಲೆ ಪರನವಾಡಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ರಾಷ್ಟ್ರಧ್ವಜ ಸಮೇತ ಸ್ಥಳಾಂತರಗೊಳಿಸಿ ಅಪಮಾನ ಮಾಡುವ ಜೊತೆಗೆ ರಾಯಣ್ಣ ಅಭಿಮಾನಿಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಕಿತ್ತೂರು ಸಂಸ್ಥಾನದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ರಾಯಣ್ಣ ನಮಗೆಲ್ಲ ಆದರ್ಶ. ಅವರ ಜನ್ಮ ದಿನದಂದೇ ಈ ಘಟನೆ ನಡೆದಿದ್ದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್​ ನಡೆಸುವ ಮೂಲಕ ದೌರ್ಜನ್ಯವೆಸಗಿದ ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ABOUT THE AUTHOR

...view details