ಕರ್ನಾಟಕ

karnataka

ETV Bharat / state

ಟಿಎಲ್​ಬಿಸಿ ಕೆಳಭಾಗದ ರೈತರಿಂದ ನೀರಿಗಾಗಿ ಪ್ರತಿಭಟನೆ

ತುಂಗಭದ್ರಾ ಎಡದಂಡೆ ನಾಲೆ ಕೆಳಭಾಗದ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ಸಿರವಾರ ಪಟ್ಟಣದ ನೀರಾವರಿ ಇಲಾಖೆಯ ಕಚೇರಿ ಬಳಿ ರೈತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ
ಪ್ರತಿಭಟನೆ

By

Published : Jan 15, 2021, 8:20 PM IST

ರಾಯಚೂರು: ತುಂಗಭದ್ರಾ ಎಡದಂಡೆ ನಾಲೆ ಕೆಳಭಾಗದ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ಸಿರವಾರ ಪಟ್ಟಣದ ನೀರಾವರಿ ಇಲಾಖೆಯ ಕಚೇರಿ ಬಳಿ ರೈತರು ಪ್ರತಿಭಟನೆ ನಡೆಸಿದರು.

ತುಂಗಭದ್ರಾ ನದಿಯಲ್ಲಿ ನೀರಿನ ಲಭ್ಯತೆಯಿದ್ದು, ರೈತರ ಎರಡನೇ ಬೆಳೆಗಳಿಗಾಗಿ ಕಾಲುವೆಗಳಿಗೆ ನಿಗದಿಯಂತೆ ನೀರನ್ನ ಹರಿಸಬೇಕು. ಆದರೆ, ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಳಭಾಗದ ರೈತರಿಗೆ ವ್ಯವಸಾಯಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ಕೆಳಭಾಗದ ನಾಲೆಗಳಿಗೆ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯಲ್ಲಿ ತಿರ್ಮಾನಿಸಿದಂತೆ ನಿಗದಿ ಪ್ರಮಾಣದಲ್ಲಿ ನೀರು ಹರಿಸುವಂತೆ ಒತ್ತಾಯಿಸಿದರು.

ಟಿಎಲ್​ಬಿಸಿ ಕೆಳಭಾಗದ ರೈತರಿಂದ ನೀರಿಗಾಗಿ ಪ್ರತಿಭಟನೆ

ಪ್ರತಿಭಟನೆಯಲ್ಲಿ ರಾಜಕೀಯ ನಾಯಕರು, ಸ್ಥಳೀಯ ಮುಖಂಡರು, ರೈತ ಹೋರಾಟಗಾರರು ಭಾಗವಹಿಸಿದ್ದರು.

ABOUT THE AUTHOR

...view details