ಕರ್ನಾಟಕ

karnataka

ETV Bharat / state

ಮೋದಿಗೆ ವೋಟ್​ ಹಾಕಿ ನಮ್ಗೆ ಕೇಳ್ತೀರಾ? ಮುತ್ತಿಗೆ ಹಾಕಿದ ಪ್ರತಿಭಟನಾಕಾರರ ಮೇಲೆ ಸಿಎಂ ಗರಂ.! - undefined

ನೂರಾರು ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂ ಬಸ್​​​ಗೆ ​ ಮುತ್ತಿಗೆ ಹಾಕಿದಾಗ, ಮೋದಿಗೆ ವೋಟ್​ ಹಾಕ್ತೀರಾ. ಇಲ್ಲಿ ಬಂದು ನಮ್ಮನ್ನ ಕೇಳ್ತೀರಾ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಭೇಟಿಗೆ ಪಟ್ಟು

By

Published : Jun 26, 2019, 11:36 AM IST

Updated : Jun 26, 2019, 11:46 AM IST

ರಾಯಚೂರು : ಕರೆಗುಡ್ಡ ಗ್ರಾಮಕ್ಕೆ ತೆರಳುವಾಗ ವೈಟಿಪಿಎಸ್ ಮತ್ತು ತುಂಗಭದ್ರಾ ಹಂಗಾಮಿ ಗುತ್ತಿಗೆ ಕಾರ್ಮಿಕರು ಸಿಎಂ ಕುಮಾರಸ್ವಾಮಿ ಬಸ್​ಗೆ ಮುತ್ತಿಗೆ ಹಾಕಿದರು. ಈ ವೇಳೆ, ಸಿಎಂ ಪ್ರತಿಭಟನಾ ನಿರತರ ಮೇಲೆ ಗರಂ ಆದರು.

ಪ್ರತಿಭಟನಾಕಾರರ ಹೋರಾಟ ಹತ್ತಿಕ್ಕಲು ಪೊಲೀಸರು ಮುಂದಾದರು. ಈ ವೇಳೆ, ಪ್ರತಿಭಟಾನಾಕಾರರು ಹಾಗೂ ಪೊಲೀಸರ ಮಧ್ಯೆ ನೂಕು ನುಗ್ಗಲು ಉಂಟಾಗಿ ಸುಮಾರು 20 ನಿಮಿಷಗಳ ಕಾಲ ಬಸ್ ಅಲ್ಲಿಯೇ ನಿಂತಿತ್ತು. ಈ ವೇಳೆ ಮೋದಿಗೆ ವೋಟ್​ ಹಾಕ್ತೀರಾ. ಇಲ್ಲಿ ಬಂದು ನಮ್ಮನ್ನ ಕೇಳ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಸ್​ಗೆ ದಾರಿ ಬಿಡಲ್ವಾ? ಲಾಠಿ ಚಾರ್ಜ್​ ಮಾಡಬೇಕಾ ಎಂದು ಗದರಿದರು.

ಮೋದಿಗೆ ವೋಟ್​ ಹಾಕಿ ನಮ್ಗೆ ಕೇಳ್ತೀರಾ?

ವೈಟಿಪಿಎಸ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕರನ್ನ ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ಕಾರ್ಮಿಕರನ್ನ ಕೆಲಸಕ್ಕೆ ಮರು ನೇಮಕಾತಿ ಮಾಡಿಕೊಳ್ಳುವ ಮೂಲಕ ಉದ್ಯೋಗ ಭದ್ರತೆ ಒದಗಿಸುವಂತೆ ಆಗ್ರಹಿಸಿದರು. ಅಲ್ಲದೇ ತುಂಗಭದ್ರಾ ಹಂಗಾಮಿ ಗುತ್ತಿಗೆ ಕಾರ್ಮಿಕರ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಸಿಎಂಗೆ ನಮ್ಮ ಮನವಿಗೆ ಸ್ಪಂದಿಸುವಂತೆ ಮನವಿ ಮಾಡಲು ಮುಂದಾದಾಗ ಪೊಲೀಸರು ತಡೆದಿದ್ದರಿಂದ ಕುಪಿತಗೊಂಡ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು ಎನ್ನಲಾಗಿದೆ.

Last Updated : Jun 26, 2019, 11:46 AM IST

For All Latest Updates

TAGGED:

ABOUT THE AUTHOR

...view details