ರಾಯಚೂರು:ಸಿಎಂ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾರ್ಮಿಕರು ಬಸ್ಗೆ ಮುತ್ತಿಗೆ ಹಾಕಿದ ಘಟನೆಯನ್ನು ಖಂಡಿಸಿ ಸಿಪಿಐ ದತ್ತಾತ್ರೆಯ ಕಾರ್ನಾಡ್ ಮತ್ತು ಪಿಎಸ್ಐ ಲಿಂಗಪ್ಪ ಅವರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ಟಿಯುಸಿಐ ಇಂದು ಪ್ರತಿಭಟನೆ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಚಿವ ನಾಡಗೌಡರನ್ನ ಸಂಪುಟದಿಂದ ಕೈಬಿಡಿ: ಟಿಯುಸಿಐಯಿಂದ ಪ್ರತಿಭಟನೆ - undefined
ಸಿಎಂ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾರ್ಮಿಕರು ಬಸ್ ಗೆ ಮುತ್ತಿಗೆ ಹಾಕಿದ ಘಟನೆಯನ್ನು ಖಂಡಿಸಿ ಸಿಪಿಐ ದತ್ತಾತ್ರೆಯ ಕಾರ್ನಾಡ್ ಮತ್ತು ಪಿಎಸ್ಐ ಲಿಂಗಪ್ಪ ಅವರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ಟಿಯುಸಿಐ ಇಂದು ಪ್ರತಿಭಟನೆ ನಡೆಸಿತು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಸಚಿವ ವೆಂಕಟರಾವ್ ನಾಡಗೌಡ ಅವರನ್ನುಸಚಿವ ಸಂಪುಟದಿಂದ ಕೈಬಿಡಬೇಕೆಂದು ಟಿಯುಸಿಐಯಿಂದ ಪ್ರತಿಭಟನೆ
ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ಹಾಗೂ ಯರಮರಸ್ ಥರ್ಮಲ್ ಪವರ್ ಸೆಕ್ಟರ್ ವೈಟಿಪಿಎಸ್ ಕಾರ್ಮಿಕರು ಸತತ ಹೋರಾಟ ಮಾಡುತ್ತಾ ಬಂದರೂ ಕ್ಯಾರೆ ಎನ್ನದ ಕಾರಣ ಸಿಎಂ ಅವರು ಗ್ರಾಮ ವಾಸ್ತವ್ಯದ ನಿಮಿತ್ತ ನಗರಕ್ಕೆ ಆಗಮಿಸಿದಾಗ ಸಿಎಂ ಬಸ್ ನಿಲ್ಲಿಸಿ ಬೇಡಿಕೆಗೆ ಒತ್ತಾಯಿಸಿದಾಗ ಭದ್ರತಾ ಲೋಪವೆಸಗಿದ್ದಾರೆ ಎಂಬ ಕಾರಣ ನೀಡಿ ಅಮಾನತು ಮಾಡಿದ್ದು ಖಂಡನಾರ್ಹ ಎಂದು ದೂರಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಡಿಸಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.