ರಾಯಚೂರು:ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವನ್ನು ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ.
ಎಂಜಿನಿಯರಿಂಗ್ ವಿದ್ಯಾರ್ಥಿನಿಯ ನಿಗೂಢ ಸಾವು: ರಾಯಚೂರಿನಲ್ಲಿ ಮುಂದುವರಿದ ಪ್ರತಿಭಟನೆ
ಇಂಜಿನಿಯರಿಂಗ್ ವಿದ್ಯಾರ್ಥಿನಿಯ ನಿಗೂಢ ಸಾವಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಾವನ್ನು ಖಂಡಿಸಿ ಜಿಲ್ಲೆಯ ಯರಗೇರಾ ಪಿ.ಜಿ ಸೆಂಟರ್ ಹಾಗೂ ಕವಿತಾಳ ಗ್ರಾಮದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ರಾಯಚೂರಿನಲ್ಲಿ ಮುಂದುವರಿದ ಪ್ರತಿಭಟನೆ
ರಾಯಚೂರಿನ ಹೊರವಲಯದ ಯರಗೇರಾ ಪಿ.ಜಿ ಸೆಂಟರ್ನ ಹೊರಗಡೆ ಪಾದಯಾತ್ರೆ ಮಾಡಿದ ವಿವಿಧ ವಿಭಾಗದ ವಿದ್ಯಾರ್ಥಿಗಳು ಸಾವನ್ನಪ್ಪಿದ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಘಟನೆಯನ್ನು ಖಂಡಿಸಿ, ಸಾವುಗೆ ಕಾರಣನಾದ ಆರೋಪಿಯನ್ನು ಕಠಿಣ ಶಿಕ್ಷೆಗೊಳಪಡಿಸಲು ಒತ್ತಾಯಿಸಿದರು.
ಇತ್ತ ವಿದ್ಯಾರ್ಥಿನಿ ಸಾವಿನ ಸಮಗ್ರ ತನಿಖೆ ಮಾಡಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ SFI & DYFI ವತಿಯಿಂದ ಕವಿತಾಳ ಪಟ್ಟಣದ ಅನ್ವರಿ ಕ್ರಾಸ್ (ಕನಕ ದಾಸ್ ವೃತ್ತ)ನಲ್ಲಿ ಮೊಂಬತ್ತಿ ಹಚ್ಚಿ ಪ್ರತಿಭಟನೆ ಮಾಡಲಾಯಿತು.