ಕರ್ನಾಟಕ

karnataka

ETV Bharat / state

ಗೋರೆಬಾಳ ಪಿಕಪ್​ ಯೋಜನೆಯ ಕಳಪೆ ಕಾಮಗಾರಿ ಆರೋಪ: ರಸ್ತೆ ತಡೆದು ಪ್ರತಿಭಟನೆ - undefined

ರಾಯಚೂರಿನ ಗೋರೆಬಾಳ ಪಿಕಪ್​ ಯೋಜನೆಯ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ ಡ್ಯಾಂನ ಹಿತರಕ್ಷಣಾ ಸಮಿತಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿತು.

ರಸ್ತೆ ತಡೆ ನಡೆಸಿ ಪ್ರತಿಭಟನೆ

By

Published : Jul 6, 2019, 1:52 AM IST

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಗೋರೆಬಾಳ ಪಿಕಪ್ ಡ್ಯಾಂ ಕಾಮಗಾರಿಯನ್ನು ಕಳಪೆಯಾಗಿ ನಿರ್ವಹಿಸಿದ್ದಾರೆ. ಕೂಡಲೇ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಿ ಎಂದು ಗೋರೆಬಾಳ್ ಪಿಕಪ್ ಹಿತರಕ್ಷಣಾ ಸಮಿತಿಯು ಬುದಿಹಾಲ್ ಕ್ಯಾಂಪಿನಲ್ಲಿ ರಸ್ತೆ ತಡೆ ನಡೆಸಿತು.

ಗೋರೆಬಾಳ ಪಿಕಪ್ ಡ್ಯಾಂ ಸೇರಿದಂತೆ ಸದರಿ ಕಾಮಗಾರಿಯೂ ಕಳಪೆಯಾಗಿದ್ದು, ಮರಳು ತೆರಳುಸುವುದು ಹಾಗೂ ಬೆಡ್ ಲೆವೆಲ್ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಈ ಕುರಿತು 19-6-2019ರಂದು ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿದಾಗ ಸಾಭೀತಾಗಿದೆ.

ಈ ಸಂಬಂಧ ಕೂಡಲೇ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

For All Latest Updates

TAGGED:

ABOUT THE AUTHOR

...view details