ರಾಯಚೂರು : ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದ ಬಾಲಕಾರ್ಮಿಕ ಇಲಾಖೆ ಅಧಿಕಾರಿಗಳು 25 ಮಕ್ಕಳನ್ನು ರಕ್ಷಸಿ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಮಕ್ಕಳನ್ನು ಒಪ್ಪಿಸಿದ್ದಾರೆ.
ಸಿರವಾರದಲ್ಲಿ ಕೃಷಿ ಕೆಲಸಕ್ಕೆಂದು ಬಳಸಿಕೊಳ್ಳುತ್ತಿದ್ದ 25ಮಂದಿ ಬಾಲ ಕಾರ್ಮಿಕರ ರಕ್ಷಣೆ - 25 child labor protection
ಮಾನವಿ ಕ್ರಾಸ್, ನಾಗಡದಿನ್ನಿ, ದೇವದುರ್ಗ ಕ್ರಾಸ್ ಸೇರಿದಂತೆ ನಾನಾ ಕಡೆ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ 25 ಮಂದಿ ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಮಕ್ಕಳನ್ನು ಕೃಷಿ ಕೆಲಸಕ್ಕೆಂದು ಕರೆದೊಯ್ಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ..
![ಸಿರವಾರದಲ್ಲಿ ಕೃಷಿ ಕೆಲಸಕ್ಕೆಂದು ಬಳಸಿಕೊಳ್ಳುತ್ತಿದ್ದ 25ಮಂದಿ ಬಾಲ ಕಾರ್ಮಿಕರ ರಕ್ಷಣೆ child laborers](https://etvbharatimages.akamaized.net/etvbharat/prod-images/768-512-9512341-757-9512341-1605093597112.jpg)
ಜಿಲ್ಲೆಯ ಸಿರವಾರ ಪಟ್ಟಣದ ಮಾನವಿ ಕ್ರಾಸ್, ನಾಗಡದಿನ್ನಿ, ದೇವದುರ್ಗ ಕ್ರಾಸ್ ಸೇರಿದಂತೆ ನಾನಾ ಕಡೆ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ 25 ಮಂದಿ ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಮಕ್ಕಳನ್ನು ಕೃಷಿ ಕೆಲಸಕ್ಕೆಂದು ಕರೆದೊಯ್ಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಮಕ್ಕಳ ರಕ್ಷಣೆ ಮಾಡಲಾಗಿದೆ.
ಈ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ವಾಹನ ಜಪ್ತಿ ಮಾಡಲಾಗಿದೆ. ರಕ್ಷಣೆ ಮಾಡಿರುವ ಬಾಲ ಕಾರ್ಮಿಕರ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವ ಮೂಲಕ ಮರಳಿ ಅವರಿಗೆ ಒಪ್ಪಿಸಲಾಗಿದೆ. ಗೂಡ್ಸ್ ವಾಹನಗಳಲ್ಲಿ ಮಕ್ಕಳನ್ನು ಕೃಷಿ ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದು, 200 ರೂ. ಕೂಲಿ ಹಣ ಪಾವತಿಸಲಾಗುತ್ತಿದೆ.