ಕರ್ನಾಟಕ

karnataka

ETV Bharat / state

ಬ್ಯಾನರ್​​ನಲ್ಲಿ ರಾಮುಲು ಫೋಟೋ ಹಾಕದ್ದಕ್ಕೆ ಕಾರ್ಯಕ್ರಮ ಬಹಿಷ್ಕರಿಸಿದ ಅಭಿಮಾನಿಗಳು! - ಬ್ಯಾನರ್​​ನಲ್ಲಿ ರಾಮುಲು ಫೋಟೊ ಕಡೆಗಣನೆ

ಬ್ಯಾನರ್​​​ನಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪೋಟೋ ಹಾಕಿಸದೇ ಶಾಸಕ ಪ್ರತಾಪ ಗೌಡ ಅವರು ಕಡೆಗಣಿಸಿದ್ದಾರೆ ಎಂದು ಬಿ.ಶ್ರೀರಾಮುಲು ಅಭಿಮಾನಿಗಳು ಕಾರ್ಯಕ್ರಮ ಬಹಿಷ್ಕರಿಸಿದರು.

Program boycott from shriRamulu fans in Raichur
ಕಾರ್ಯಕ್ರಮ ಬಹಿಷ್ಕರಿಸಿದ ಅಭಿಮಾನಿಗಳು

By

Published : Jan 9, 2020, 6:09 PM IST

ರಾಯಚೂರು:ಬ್ಯಾನರ್​​​ನಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪೋಟೋ ಹಾಕಿಸದೇ ಶಾಸಕ ಪ್ರತಾಪ ಗೌಡ ಅವರು ಕಡೆಗಣಿಸಿದ್ದಾರೆ ಎಂದು ಬಿ.ಶ್ರೀರಾಮುಲು ಅಭಿಮಾನಿಗಳು ಕಾರ್ಯಕ್ರಮ ಬಹಿಷ್ಕರಿಸಿದರು.

ಬ್ಯಾನರ್​

ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಪರ ಬೆಂಬಲ, ಬೈಕ್ ರ್ಯಾಲಿ, ಬಹಿರಂಗ ಸಭೆ ಮತ್ತು ನೂತನ ಕಾರ್ಯಾಲಯ ಉದ್ಘಾಟನೆ ಸಮಾರಂಭ ಏರ್ಪಡಿಸಲಾಗಿತ್ತು. ಇದಕ್ಕಾಗಿ ಪಟ್ಟಣದಲ್ಲಿ ಬ್ಯಾನರ್ ಹಾಕಿಸಲಾಗಿದೆ. ಆ ಬ್ಯಾನರ್​ನಲ್ಲಿ ರಾಮುಲು ಫೋಟೋ ಹಾಕಿಸಿರಲಿಲ್ಲ.

ಕಾರ್ಯಕ್ರಮ ಬಹಿಷ್ಕರಿಸಿದ ಬಿ.ಶೀರಾಮುಲು ಅಭಿಮಾನಿಗಳು

ಪಕ್ಷದ ಹಿರಿಯ ಮುಖಂಡರ ಜೊತೆಗೆ ರಾಯಚೂರು ಜಿಲ್ಲಾ ಉಸ್ತುವರಿ ಸಚಿವರಾದ ಬಿ.ಶ್ರೀರಾಮುಲು ಫೋಟೋ ಹಾಕಿಸಿಲ್ಲ. ಈ ಮೂಲಕ ಅವರನ್ನು ಕಡೆಗಣಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ ಅವರು ಮಸ್ಕಿ ಶಾಸಕ ಪ್ರತಾಪ್​​​ ಗೌಡ ಅವರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅವರನ್ನು ಸಮಾಧಾನಪಡಿಸಲು ಪಕ್ಷದ ಮುಖಂಡರು ಮುಂದಾದರು.

ಸಮಾಧಾನಗೊಳ್ಳದ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದರು. ಆಗ ಮುಖಂಡರು ಕ್ಷೇಮೆ ಕೇಳಿದರು. ಗಲಾಟೆಯಿಂದಾಗಿ ಬಿಜೆಪಿ ಮುಖಂಡರು ಮುಜುಗರ ಅನುಭವಿಸಬೇಕಾಯಿತು.

ABOUT THE AUTHOR

...view details