ಕರ್ನಾಟಕ

karnataka

ETV Bharat / state

ರಾಯಚೂರಿನ ನೂತನ ವಿವಿಗೆ ಕುಲಸಚಿವರಾಗಿ ಪ್ರೊ. ವಿಶ್ವನಾಥ ಅಧಿಕಾರ ಸ್ವೀಕಾರ - Vice Chancellor of Raichur VV

ಪ್ರೊ. ವಿಶ್ವನಾಥ ಎಂ. ಅವರು ತಾಲೂಕಿನ ಯರಗೇರಾ ಗ್ರಾಮದ ಬಳಿ ಇರುವ ವಿವಿ ಕ್ಯಾಂಪಸ್​ ಕುಲಸಚಿವರ ಕೊಠಡಿಯಲ್ಲಿ ಕಡತಕ್ಕೆ ಸಹಿ ಹಾಕುವ ಮೂಲಕ ರಾಯಚೂರಿನ ನೂತನ ವಿಶ್ವವಿದ್ಯಾಲಯದ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಪ್ರೋ.ವಿಶ್ವನಾಥ.ಎಂ
ಪ್ರೋ.ವಿಶ್ವನಾಥ.ಎಂ

By

Published : Jan 4, 2021, 10:22 PM IST

ರಾಯಚೂರು:ನೂತನ ವಿಶ್ವವಿದ್ಯಾಲಯದ ಕುಲಸಚಿವರಾಗಿ(ಮೌಲ್ಯಮಾಪನ) ಪ್ರೊ. ವಿಶ್ವನಾಥ ಎಂ. ಅಧಿಕಾರ ಸ್ವೀಕರಿಸಿದರು.

ಪ್ರೊ. ವಿಶ್ವನಾಥ ಎಂ. ಅವರು ತಾಲೂಕಿನ ಯರಗೇರಾ ಗ್ರಾಮದ ಬಳಿ ಇರುವ ವಿವಿ ಕ್ಯಾಂಪಸ್​ ಕುಲಸಚಿವರ ಕೊಠಡಿಯಲ್ಲಿ ಕಡತಕ್ಕೆ ಸಹಿ ಹಾಕುವ ಮೂಲಕ ರಾಯಚೂರಿನ ನೂತನ ವಿಶ್ವವಿದ್ಯಾಲಯದ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ನೂತನವಾಗಿ ಆರಂಭವಾದ ರಾಯಚೂರು ವಿಶ್ವವಿದ್ಯಾಲಯದಲ್ಲಿ ಆರಂಭದಿಂದಲೇ ತ್ವರಿತ ಹಾಗೂ ಗುಣಮಟ್ಟದ ಪರೀಕ್ಷೆ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ಈ ಭಾಗದ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ ತುಂಬಿ ಎರಡೂ ಜಿಲ್ಲೆಗಳ ಎಲ್ಲಾ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

ಈ ವೇಳೆ ಕುಲಪತಿ ಡಾ. ಹರೀಶ ರಾಮಸ್ವಾಮಿ, ಗುವಿವಿಯ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ. ಪಾರ್ವತಿ ಸಿ.ಎಸ್., ಉಪಕರಣಾತ್ಮಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಭಾಸ್ಕರ್, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ವಾಸುದೇವ ಜೇವರ್ಗಿ, ಉಪ ಗ್ರಂಥಪಾಲಕರು ಹಾಗೂ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಜಿ.ಎಸ್.ಬಿರಾದಾರ್ ಹಾಗೂ ಸಿಬ್ಬಂದಿ ವರ್ಗ ಇದ್ದರು.

ABOUT THE AUTHOR

...view details