ರಾಯಚೂರು : ನಗರದ ರಾಜಕಾಲುವೆಯಲ್ಲಿ ಖಾಸಗಿ ಹೊಟೇಲ್‌ನವರು ಕಟ್ಟಡಗಳ ಅವಶೇಷಗಳು ಮತ್ತು ತ್ಯಾಜ್ಯವಸ್ತುಗಳನ್ನು ರಾಜರೋಷವಾಗಿ ಸುರಿಯುತ್ತಿದ್ದು, ಚರಂಡಿ ನೀರು ಹರಿಯುವಿಕೆಗೆ ಅಡಚಣೆ ಉಂಟಾಗಿದೆ. ಅದರೆ ಈ ಕುರಿತು ನಗರ ಪಾಲಿಕೆ ಸುಮ್ಮನಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜಕಾಲುವೆ ಸೇರ್ತಿದೆ ಹೊಟೇಲ್ಗಳ ತ್ಯಾಜ್ಯ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ - ರಾಯಚೂರು ರಾಜಕಾಲುವೆ ಒತ್ತುವರಿ ಸುದ್ದಿ
ನಗರದ ಅಂಬೇಡ್ಕರ್ ಸರ್ಕಲ್ ಬಳಿ ಹಾದು ಹೋಗಿರುವ ರಾಜ ಕಾಲುವೆಯಲ್ಲಿ ಹಾಡುಹಾಗಲೇ ಖಾಸಗಿ ಹೊಟೇಲ್‌ನವರು ರಾಜಾರೋಷವಾಗಿ ಕಟ್ಟಡದ ಅವಶೇಷಗಳು ಮತ್ತು ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ತಂದು ಸುರಿಯುತ್ತಿದ್ದಾರೆ. ಇದರಿಂದಾಗಿ ಚರಂಡಿ ನೀರು ಹರಿಯುವಿಕೆಗೆ ಅಡಚಣೆಯಾಗಿದೆ.
ರಾಜಕಾಲುವೆಗೆ ಸೇರುತ್ತಿದೆ ಹೋಟೆಲ್ಗಳ ತ್ಯಾಜ್ಯ
ನಗರದ ಅಂಬೇಡ್ಕರ್ ಸರ್ಕಲ್ ಬಳಿ ಹಾದು ಹೋಗಿರುವ ರಾಜ ಕಾಲುವೆಯಲ್ಲಿ ಹಾಡುಹಾಗಲೇ ರಾಜಾರೋಷವಾಗಿ ಕಟ್ಟಡದ ಅವಶೇಷಗಳನ್ನು ಟ್ರ್ಯಾಕ್ಟರ್ ಮೂಲಕ ತಂದು ಸುರಿಯಲಾಗುತ್ತಿದೆ. ಮೊದಲೇ ರಾಜಕಾಲುವೆಯಲ್ಲಿ ಕಸ ತುಂಬಿದ್ದು ಚರಂಡಿ ನೀರು ನಿಂತಲ್ಲೇ ನಿಂತಿದೆ. ಇದರ ನಡುವೆ ಖಾಸಗಿ ಹೊಟೇಲ್‌ನವರು ತಾಜ್ಯ ಮತ್ತು ಕಟ್ಟಡದ ಅವಶೇಷಗಳನ್ನು ಸುರಿಯುತ್ತಿರುವುದರಿಂದ ನೀರು ಹರಿಯುವಿಕೆ ಸಂಪೂರ್ಣ ಬಂದ್ ಆಗಿದೆ.
ಈ ರೀತಿ ಕಸ ಸುರಿಯುವ ಮೂಲಕ ಮುಂದಿನ ದಿನಗಳಲ್ಲಿ ಜಾಗವನ್ನೇ ಒತ್ತುವರಿ ಮಾಡಬಹುದಾ? ಎನ್ನುವ ಅನುಮಾನವೂ ಸಾರ್ವಜನಿಕರನ್ನು ಕಾಡುತ್ತಿದೆ.